ದಿನದ ಸುದ್ದಿ

ಶಾಕಿಂಗ್ ನ್ಯೂಸ್: ಅಮೆರಿಕದಲ್ಲಿ ಪ್ರಬಲ ಭೂಕಂಪನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್: ಅಮೆರಿಕದ ಅಲಾಸ್ಕಾ ರಾಜ್ಯದಲ್ಲಿ ಭಾನುವಾರ ಪ್ರಬಲ ಭೂಕಂಪನ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಶಾಕ್ ಮೂಡಿಸಿದೆ. ಇಂತಹ ಶಕ್ತಿಯುತ ಭೂಕಂಪನವು 1995 ರಲ್ಲಿ ಸಂಭವಿಸಿದೆ ಎಂದು ಹೇಳಲಾಗಿದೆ.

ಭೂಕಂಪನದ ಪ್ರಮಾಣವು 6.4 ರಷ್ಟು ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಅಲಾಸ್ಕಾದ ದೂರದ ಭಾಗದಲ್ಲಿ ಭೂಕಂಪನವಾಗಿದೆ ಎಂದು ಯುಎಸ್ ಭೌಗೋಳಿಕ ಸಮೀಕ್ಷೆ ದೃಢಪಡಿಸಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ. ಸದ್ಯ ಸ್ಥಳದಲ್ಲಿ ರಕ್ಷಣಾ ಪರಿಹಾರ ಕಾರ್ಯ ಮುಂದುವರೆದಿದೆ.

Leave a Reply

Your email address will not be published. Required fields are marked *

Trending

Exit mobile version