ದಿನದ ಸುದ್ದಿ
Big Breaking: ಚಿಕ್ಕಮಗಳೂರು ಜಿಲ್ಲೆಯ ಗ್ರಾಮವೊಂದರಲ್ಲಿ ಭೂಕಂಪ ಸೂಚನೆ!
ಸುದ್ದಿದಿನ ಡೆಸ್ಕ್: ಚಿಕ್ಕಮಗಳೂರು ಜಿಲ್ಲೆ ಗ್ರಾಮವೊಂದರಲ್ಲಿ ಲಘು ಭೂಕಂಪನ ಅನುಭವವಾಗಿದೆಯಂತೆ ! . ಕಳೆದ ಎರಡು ತಿಂಗಳಿನಿಂದ ಕೊಗ್ರೆ ಗ್ರಾಮದಲ್ಲಿ ಇಂತಹ ಅನುಭವವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕೊಪ್ಪ ತಾಲೂಕು ಕೊಗ್ರೆ ಗ್ರಾಮದಲ್ಲಿ ಭೂಕಂಪದ ಅನುಭವವಾಗಿದೆ ಎಂದು ತಿಳಿದು ಬಂದಿದೆ.
ಭೂಮಿಯೊಳಗಿನಿಂದ ಭಾರಿ ಶಬ್ದ ಕೇಳಿ ಬರುತ್ತಿದೆ. ಇದರಿಂದ ಭಯಭೀತರಾದ ಜನತೆ ಮನೆಗಳನ್ನು ತೊರೆದು ಬೇರೆ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ಭೂಕಂಪದ ಅನುಭವದಿಂದಾಗಿ ಮನೆಯಲ್ಲಿರುವ ವಸ್ತುಗಳು ಕೆಳಗೆ ಬೀಳುತ್ತಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.