ದಿನದ ಸುದ್ದಿ

ಅಚ್ಚರಿ | ಭೂಕಂಪ ಸಂಭವಿಸಿ ಅವಶೇಷಗಳಡಿ ಸಿಲುಕಿ 91 ಗಂಟೆಗಳ ನಂತರವೂ ಜೀವಂತವಾಗಿದ್ದ ಮೂರು ವರ್ಷದ ಕಂದಮ್ಮ‌..!

Published

on

ಸುದ್ದಿದಿನ ಡೆಸ್ಕ್ : ಟರ್ಕಿಯಲ್ಲಿ ಈಚೆಗೆ ಸಂಭವಿಸಿದ ಭೂಕಂಪದ ಹಲವರು ಜೀವ ಕಳೆದುಕೊಂಡಿದ್ದಾರೆ. ಆದರೆ ಕಟ್ಟಡವೊಂದರ ಅವಶೇಷಗಳಡಿ ಸಿಲುಕಿದ ಮೂರು ವರ್ಷದ ಕಂದಮ್ಮ 91 ಗಂಟೆಗಳ ನಂತರವೂ ಕೂಡ ಜೀವ ಉಳಿಸಿಕೊಂಡು ಅಚ್ಚರಿ ಮೂಡಿಸಿದೆ.

ಹೌದು, ಇಜ್ಮೇರ್ ಬಳಿಯ ಬಂದರು ನಗರಿಯಲ್ಲಿ ಎಂಟು ಮಹಡಿ ಕಟ್ಟಡದ ಅವಶೇಷಗಳನ್ನು ಸಿಬ್ಬಂದಿ ತೆರುವುಗೊಳಿಸುತ್ತಿದ್ದ ವೇಳೆ ಮಗು ಜೀವಂತವಾಗಿ ಪತ್ತೆಯಾಗಿದೆ. ಭೂಕಂಪ ಸಂಭವಿಸಿ 91 ಗಂಟೆಗಳಾದರೂ ಯಾರಾದರೂ ಜೀವಂತ ಇದ್ದಾರಾ ಎಂಬ ಕುತೂಹಲದಿಂದ ರಕ್ಷಣಾ ಸಿಬ್ಬಂದಿ ಹುಡುಕಿದ್ದಾರೆ.

ಆ ವೇಳೆ ಸಿಬ್ಬಂದಿಗೆ ಮಗುವಿನ ದನಿ ಕೇಳಿಸಿದೆ. ಕಾರ್ಯಾಚರಣೆ ಚುರುಕುಗೊಳಿಸಿದಾಗ ಆ ಕಟ್ಟಡದಲ್ಲಿ ಒಂದು ಜೀವ ಇನ್ನೂ ಉಸಿರಾಡುತ್ತಿದ್ದುದು ಗೊತ್ತಾಗಿದೆ. ನೂರಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರು ಎಚ್ಚರಿಕೆಯಿಂದಲೇ ಎಲ್ಲವನ್ನೂ ತೆರವುಗೊಳಿಸಿದ್ದಾರೆ.

ಆಗ ಅಡುಗೆ ಕೋಣೆಯ ಡಿಶ್-ವಾಶ್ ಕೆಳಗೆ ಇಕ್ಕಟ್ಟಾದ ಜಾಗದಲ್ಲಿ ಪುಟ್ಟ ಮಗು ಪತ್ತೆಯಾಗಿದೆ.

ತುರ್ತು ವೈದ್ಯಕೀಯ ತಂಡದ ವೈದ್ಯರು ಆ ಜೀವದ ನಾಡಿ ಹಿಡಿದು ನೋಡಿದರು, ಹೃದಯ ಬಡಿತ ಪರೀಕ್ಷಿಸಿದ್ದಾರೆ. 91 ಗಂಟೆಗಳು ಕಳೆದಿದ್ದರೂ ಆ ಮಗುವಿನ ಆರೋಗ್ನ ಚೆನ್ನಾಗೇ ಇತ್ತು.

ಆ ಮಗುವನ್ನು ಈಚೆಗೆ ತಂದ ರೆಡ್ ಕ್ರೆಸೆಂಟ್ ಟೀಮ್ ನ ನುಸ್ರತ್ ಅಕೋಯ್ ಅದರ ಹಣೆಗೊಂದು ಸಿಹಿ ಮುತ್ತು ಕೊಟ್ಟು ‘ಗಾಡ್ ಈಸ್ ಗ್ರೇಟ್’ ಎಂದು ಉದ್ಗಾರ ತೆಗೆದರು. ಆ ಕ್ಷಣದಲ್ಲಿ ಇಡೀ ರಕ್ಷಣಾ ಸಿಬ್ಬಂದಿಯ ಕಣ್ಣು ಮಂಜಾಗಿತ್ತು ಎನ್ನುತ್ತಾರೆ ಅವರು.

ಕೃಪೆ: ಮಂಜುನಾಥ್ ಚಾಂದ್ ಫೇಸ್‌ಬುಕ್‌ ವಾಲ್ ನಿಂದ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version