ದಿನದ ಸುದ್ದಿ
ವಿದೇಶದಲ್ಲಿ ವಿದ್ಯಾಭ್ಯಾಸ | ಪರಿಶಿಷ್ಟ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸದ್ಬಳಕೆ | ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ
ಸುದ್ದಿದಿನ ಡೆಸ್ಕ್ | ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಪರಿಶಿಷ್ಟ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ ಪಡೆದುಕೊಳ್ಳುವ ಉತ್ತರ ಪ್ರದೇಶ ಮುಂದಿದ್ದು, ಕರ್ನಾಟಕ, ದೆಹಲಿ ರಾಜ್ಯಗಳು ನಂತರ ಸ್ಥಾನ ಪಡೆದುಕೊಂಡಿವೆ.
ಉತ್ತರ ಪ್ರದೇಶದ 14 ವಿದ್ಯಾರ್ಥಿಗಳು 2017-2018.ನೇ ಸಾಲಿನ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪಡೆದುಕೊಳ್ಳುವ ಮೂಲಕ ದೇಶದ ಹೆಚ್ಚಿನ ಲಾಭ ಪಡೆದ ರಾಜ್ಯವಾಗಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆಯ ಸಚಿವ ವಿಜಯ್ ಸಂಪ್ಲಾ ರಾಜ್ಯಸಭಾದಲ್ಲಿ ತಿಳಿಸಿದ್ದಾರೆ.
ಕೇಂದ್ರದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡುತ್ತದೆ. ಈ ಸೌಲಭ್ಯ ಪಡೆದ ರಾಜ್ಯಗಳಲ್ಲಿ ಉತ್ತರ ಪ್ರದೇಶ ಪ್ರಥಮ ಸ್ಥಾನ ಪಡೆದಿದ್ದರೆ, ದೆಹಲಿ ಮತ್ತು ಕರ್ನಾಟಕ ನಂತರ ಸ್ಥಾನ (9ವಿದ್ಯಾರ್ಥಿ ವೇತನ) ಪಡೆದಿವೆ. ಮಧ್ಯ ಪ್ರದೇಶ, ಮಹಾರಾಷ್ಟ್ರ ತಲಾ ೯ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಪಡೆದಿದ್ದಾರೆ. ಆದರೆ, ಅಚ್ಚರಿ ವಿಷಯವೇನೆಂದರೆ, ತ್ರಿಪುರ, ಜಾರ್ಖಾಂಡ್, ಜಮ್ಮು ಕಾಶ್ಮೀರ, ಬಿಹಾರ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಯಾವೊಬ್ಬ ವಿದ್ಯಾರ್ಥಿಗೂ ಈ ಸೌಲಭ್ಯ ಸಿಕ್ಕಿಲ್ಲ.
ಇಂಜಿನಿಯರಿಂಗ್, ಮೆಡಿಕಲ್, ವಿಜ್ಞಾನ, ಮ್ಯಾನೇಜ್ಮೆಂಟ್, ಪ್ಯುರ್ ಸೈನ್ಸ್, ಅಗ್ರಿಕಲ್ಚರಲ್ ಸೈನ್ಸ್ ಸೇರಿದಂತೆ ನಿಗದಿ ವಿವಿಧ ಕೋರ್ಸುಗಳಿಗೆ ಈ ಯೋಜನೆಯಡಿ 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಇದರಲ್ಲಿ ಟ್ಯುಷನ್ ಫೀ, ತಿಂಗಳ ನಿರ್ವಹಣೆ ವೆಚ್ಚ, ಪ್ಯಾಸೇಜ್ ವೀಸಾ ಫೀ, ಇನ್ಸುರೆನ್ಸ್ ಪ್ರೀಮಿಯಂ, ಆನ್ಯುಲ್ ಕಾಂಟಿಜೆನ್ಸಿ ಅಲೋಯೆನ್ಸ್, ಇನ್ಸಿಡೆಂಟಲ್ ಜರ್ನಿ ಅಲೋಯೆನ್ಸ್ ಒಳಗೊಂಡಿದೆ. ಒಂದು ಕುಟುಂಬದಲ್ಲಿ ಇಬ್ಬರಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ.
ಸದ್ಯಕ್ಕೆ ಈ ಯೋಜನೆಯಲ್ಲಿ ರಾಜ್ಯವಾರು ಮೀಸಲಾತಿ ಇಲ್ಲ. ಅರ್ಜಿ ಆಹ್ವಾನ ಕುರಿತು ವರ್ಷದಲ್ಲಿ ಎರಡು ಬಾರಿ ಜಾಹೀರಾತು ನೀಡಲಾಗುತ್ತದೆ.
2017-18ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ ನೀಡಿದ ಪಟ್ಟಿ
- ಉತ್ತರ ಪ್ರದೇಶ -14
- ದೆಹಲಿ -10
- ಕರ್ನಾಟಕ -10
- ಮಹಾರಾಷ್ಟ್ರ -9
- ಮಧ್ಯ ಪ್ರದೇಶ -9
- ಪಂಜಾಬ್ -7
- ತೆಲಂಗಾಣದ -6
- ತಮಿಳುನಾಡು -6
- ಆಂಧ್ರಪ್ರದೇಶ -6
- ಪಶ್ಚಿಮ ಬಂಗಾಳ -4
- ಒರಿಸ್ಸಾ -3
- ಮಣಿಪುರ -2
- ಚತ್ತೀಸಗಡ -1
ಸುದ್ದಿದಿನ.ಕಾಂ|ವಾಟ್ಸಾಪ್|9986715401