ದಿನದ ಸುದ್ದಿ
ಈಜಿಪ್ಟ್‌ಗೆ ಪ್ರಸಕ್ತ ವರ್ಷ 30 ಲಕ್ಷ ಟನ್ ಗೋಧಿ ರಫ್ತು ಗುರಿ : ಸಚಿವ ಪಿಯೂಷ್ ಗೋಯಲ್
ಸುದ್ದಿದಿನ ಡೆಸ್ಕ್: ಈಜಿಪ್ಟ್‌ಗೆ ಪ್ರಸಕ್ತ ವರ್ಷ 30 ಲಕ್ಷ ಟನ್ ಗೋಧಿ ರಫ್ತು ಗುರಿ : ಕೇಂದ್ರ ಮಾಹಿತಿಸುದ್ದಿದಿನ ಡೆಸ್ಕ್ : ಉಕ್ರೇನ್ ಮತ್ತು ರಷ್ಯಾದಿಂದ ಅತಿ ಹೆಚ್ಚು ಗೋಧಿ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿರುವ ಈಜಿಪ್ಟ್ ಈಗ ಭಾರತವನ್ನು ಗೋಧಿ ಪೂರೈಕೆದಾರರನ್ನಾಗಿ ಅನುಮೋದಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಜಗತ್ತಿನ ಅತಿದೊಡ್ಡ ಗೋಧಿ ಆಮದುದಾರ ರಾಷ್ಟ್ರವಾದ ಈಜಿಪ್ಟ್‌ಗೆ ಪ್ರಸಕ್ತ ವರ್ಷ 30ಲಕ್ಷ ಟನ್ ಗೋಧಿ ರಫ್ತು ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
2021-22ನೇ ಸಾಲಿನಲ್ಲಿ ಭಾರತ 2.05ಶತಕೋಟಿ ಡಾಲರ್ ಮೌಲ್ಯದ ದಾಖಲೆ 70ಲಕ್ಷ ಟನ್ ಗೋಧಿಯನ್ನು ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿಯ ಲಭ್ಯತೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.
ಎರಡೂ ರಾಷ್ಟ್ರಗಳು ಗೋಧಿಯ ಪ್ರಮುಖ ಉತ್ಪಾದಕ ಮತ್ತು ರಫ್ತುದಾರ ದೇಶಗಳಾಗಿದ್ದವು. ಈಜಿಪ್ಟ್ 2021ರಲ್ಲಿ ರಷ್ಯಾದಿಂದ ಸುಮಾರು1.8ಬಿಲಿಯನ್ ಅಮೆರಿಕನ್ ಡಾಲರ್ ಹಾಗೂ ಉಕ್ರೇನ್‌ನಿಂದ 610.8ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಗೋಧಿಯನ್ನು ಆಮದು ಮಾಡಿಕೊಂಡಿದೆ ಎಂದು ಪ್ರಾಧಿಕಾರ ತಿಳಿಸಿದೆ.
India, the food security soldier. 🇮🇳
Egypt has turned to India for its supply of wheat trusting us for quick & quality delivery.
Modi Govt. is leading the response to a surging global demand as our farmers give us an upper hand with a bumper harvest. pic.twitter.com/gFk8bjZ4ky
— Piyush Goyal (@PiyushGoyal) April 15, 2022
भारत, खाद्य सुरक्षा सुनिश्चित करने व वैश्विक मांग को पूरा करने में पूर्णतया सक्षम है। pic.twitter.com/2UCk2bEe4o
— Piyush Goyal (@PiyushGoyal) April 15, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243