ದಿನದ ಸುದ್ದಿ

ಇಂದು ದೇಶದ ಹಲವೆಡೆ ಈದ್ ಉಲ್ ಫಿತರ್ ಆಚರಣೆ; ರಾಷ್ಟ್ರಪತಿ, ಉಪರಾಷ್ಟ್ರಪತಿ ಸೇರಿ ಗಣ್ಯರ ಶುಭಾಶಯ

Published

on

ಸುದ್ದಿದಿನ ಡೆಸ್ಕ್ : ಕರ್ನಾಟಕ, ಕೇರಳ ಸೇರಿದಂತೆ ದೇಶದ ಹಲವೆಡೆ ಇಂದು ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್ ಆಚರಿಸುತ್ತಿದ್ದಾರೆ. ಇಂದು ರಂಜಾನ್ ಉಪವಾಸ ಮಾಸದ ಕೊನೆಯ ದಿನವಾಗಿದೆ.

ಮೊನ್ನೆ ಚಂದ್ರದರ್ಶನವಾಗಿಲ್ಲ, ಹೀಗಾಗಿ ಇಂದು ಈದ್ ಉಲ್ ಫಿತರ್ ಆಚರಿಸಲಾಗುತ್ತದೆ. ಕೊಲ್ಲಿ ರಾಷ್ಟ್ರಗಳಲ್ಲಿ ನಿನ್ನೆ ಈದ್ ಆಚರಿಸಲಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಸಂದೇಶದಲ್ಲಿ, ಮುಸ್ಲಿಂ ಬಾಂಧವರು ಒಂದು ತಿಂಗಳ ಕಾಲ ಉಪವಾಸ ಕೈಗೊಂಡು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಬಡವರಿಗೆ ಆಹಾರ ಮತ್ತು ಆಹಾರಧಾನ್ಯಗಳನ್ನು ವಿತರಿಸಲು ಅವರು ವಿಶೇಷ ಆದ್ಯತೆ ನೀಡಿದ್ದಾರೆ. ಈ ಹಬ್ಬ ಸೌಹಾರ್ದತೆ, ಶಾಂತಿ ಮತ್ತು ಸಮಾಜದಲ್ಲಿ ಸಮೃದ್ಧತೆ ನಿರ್ಮಿಸಲು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ ಎಂದು ಹಾರೈಸಿದ್ದಾರೆ.

ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಈ ಹಬ್ಬ ಸ್ನೇಹ, ಭ್ರಾತೃತ್ವ, ಪ್ರೀತಿ ಮತ್ತು ಪರಸ್ಪರ ಗೌರವವನ್ನು ಪಸರಿಸುವಂತಾಗಲಿ. ಹಬ್ಬದ ಶ್ರೀಮಂತ ಪರಂಪರೆಯಾದ ಶಾಂತಿ, ಸೌಹಾರ್ದತೆ ಮತ್ತು ಸಂತಸ ತರಲಿ ಎಂದು ಹೇಳಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಸಮಾಜದಲ್ಲಿ ಭ್ರಾತೃತ್ವ ಮತ್ತು ಒಟ್ಟಿಗೆ ಬಾಳುವ ಸ್ಫೂರ್ತಿಯನ್ನು ಹೆಚ್ಚಿಸಲಿ, ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಮತ್ತು ಸಮೃದ್ಧ ವಾತಾವರಣವನ್ನು ನಿರ್ಮಿಸಲಿ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version