ರಾಜಕೀಯ

ತೆಲಂಗಾಣದಲ್ಲಿ ಅವಧಿಗೂ ಮುನ್ನ ಚುನಾವಣೆ

Published

on

ಸುದ್ದಿದಿನ ಡೆಸ್ಕ್: ನಿರೀಕ್ಷೆಯಂತೆ ತೆಲಂಗಾಣ ಮುಖ್ಯಮಂತರಿ ಕೆಸಿ ಚಂದ್ರಶೇಖರ್ ರಾವ್ ಅವರು ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿದ್ದು, ಈ ಡಿಸೆಂಬರ್‍ನಲ್ಲಿ ಚುನಾವಣೆ ನಡೆಯಲಿದೆ.

ಟಿಆರ್‍ಎಸ್ ಪಕ್ಷವು ಸರಕಾರ ರಚಿಸಿ ನಾಲ್ಕು ವರ್ಷ ನಾಲ್ಕು ತಿಂಗಳಷ್ಟೆ ಪೂರೈಸಿದ್ದು, ಡಿಸೆಂಬರ್‍ನಲ್ಲಿ ನಡೆಯಲಿರುವ ನಾಲ್ಕು ರಾಜ್ಯಗಳ ವಿಧಾನಸಭೆ ಜತೆಗೆ ತೆಲಂಗಾಣದಲ್ಲೂ ಚುನಾವಣೆ ನಡೆಯಲಿದೆ.

ಕೆಸಿಆರ್ ಅವರು ಗುರುವಾರ ತಮ್ಮ ಪಕ್ಷದಿಂದ ಕಣಕ್ಕಿಳಿಯುತ್ತಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈಗಿನಿಂದಲೇ ತಮ್ಮ ಕ್ಷೇತ್ರಗಳಲ್ಲಿ ಕಾರ್ಯೋನ್ಮುಖರಾಗುವಂತೆ ಸೂಚನೆ ನೀಡಿದ್ದಾರೆ.

ಹೈದರಾಬಾದ್‍ನ ಪ್ರಗತಿ ಭವನದಲ್ಲಿ ಗುರುವಾರ ತುರ್ತು ಸಚಿವ ಸಂಪುಟ ಸಭೆಯನ್ನು ಮಧ್ಯಾಹ್ನ 3.30ಕ್ಕೆ ನಿಗದಿಮಾಡಲಾಗಿತ್ತು. ಕೆಸಿಆರ್ ಅವರ ನಿಲುವು ಏನೆಂಬುದು ಇನ್ನು ಸ್ಪಷ್ಟವಾಗಿಲ್ಲದ ಕಾರಣ ಕುತೂಹಲ ಸೃಷ್ಟಿಯಾಗಿತ್ತು.

Leave a Reply

Your email address will not be published. Required fields are marked *

Trending

Exit mobile version