ದಿನದ ಸುದ್ದಿ
ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಅಧ್ಯಕ್ಷರಾಗಿ ಬೆನ್ನೂರು, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಆಯ್ಕೆ
ಸುದ್ದಿದಿನ,ಸಿಂಧನೂರು : ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಶೋಕ ಬೆನ್ನೂರು, ಪ್ರಧಾನ ಕಾರ್ಯದರ್ಶಿ ಮಹ್ಮದ್ ಮುಸ್ತಫಾ ಮಂಗಳವಾರ ಚುನಾಯಿತರಾದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಿಜಯವಾಣಿ ವರದಿಗಾರ ಅಶೋಕ ಬೆನ್ನೂರು, ಈಶಾನ್ಯ ಟೈಮ್ಸ್ ವರದಿಗಾರ ಶರಣಪ್ಪ ಕೆ.ಗೋನಾಳ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬೆಂಕಿ ಬೆಳಕು ವರದಿಗಾರ ಮಹ್ಮದ್ ಮುಸ್ತಫಾ, ವಿಶ್ವವಾಣಿ ವರದಿಗಾರ ಚಂದ್ರಶೇಖರ ಯರದಿಹಾಳ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ 7 ಮತಗಳನ್ನು ಪಡೆದ ಅಶೋಕ ಬೆನ್ನೂರು ಅಧ್ಯಕ್ಷರಾಗಿ ಆಯ್ಕೆಗೊಂಡರೆ ಪ್ರತಿ ಸ್ಪರ್ಧಿ ಶರಣಪ್ಪ ಗೋನಾಳ 6 ಮತಗಳನ್ನು ಪಡೆದರು. ಮಹ್ಮದ್ ಮುಸ್ತಫಾ 7 ಮತಗಳನ್ನು ಪಡೆದು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರೆ, ಚಂದ್ರಶೇಖರ ಯರದಿಹಾಳ 6 ಮತಗಳನ್ನು ಪಡೆದು ಪರಾಭವಗೊಂಡರು.
ಚುನಾವಣಾಧಿಕಾರಿಯಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಗುರುನಾಥ, ರಾಜ್ಯ ಸಮಿತಿ ಸದಸ್ಯ ಸಿದ್ದು ಬಿರಾದರ ಕಾರ್ಯನಿರ್ವಹಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಉಪೇಂದ್ರ ಕೇಶವರಾವ, ಮಹಾನಂದಿ, ರಮೇಶ, ಎಂ.ವೀರಭದ್ರಪ್ಪ ಜವಳಗೇರಾ ಉಪಸ್ಥಿತರಿದ್ದರು.
ಪತ್ರಕರ್ತರಾದ ಡಿ.ಎಚ್.ಕಂಬಳಿ, ಪ್ರಹ್ಲಾದ ಗುಡಿ, ಶ್ಯಾಂಕುಮಾರ, ಅಮರೇಶ ಅಲಬನೂರು, ಚಂದ್ರಶೇಖರ ಬೆನ್ನೂರು, ಶರಣೇಗೌಡ ಗೊರೇಬಾಳ, ಚಿದಾನಂದ ದೊರೆ, ಶಿವಪುತ್ರ ಧನಶೆಟ್ಟಿ, ಗುರಪ್ಪ ಗುರೆಡ್ಡಿ, ಇನಾಯತ ಪಾಷಾ, ನಾಗರತ್ನ, ಬೀರಪ್ಪ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401