ದಿನದ ಸುದ್ದಿ
ದಾವಣಗೆರೆ ಲೋಕಸಭಾ ಕ್ಷೇತ್ರ | ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವಿನ ಮತಗಳ ಅಂತರವೆಷ್ಟು..? ಇತರೆ ಅಭ್ಯರ್ಥಿಗಳು ಪಡೆದ ಮತಗಳೆಷ್ಟು..? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಸುದ್ದಿದಿನ,ದಾವಣಗೆರೆ : ಲೋಕಸಭಾ ಸಾರ್ವತ್ರಿಕ ಚುನಾವಣೆ ನಡೆದಿದ್ದು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ; ಪ್ರಭಾ ಮಲ್ಲಿಕಾರ್ಜುನ್ ಅವರು 26094 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ.
ಲೋಕಸಭಾ ಚುನಾವಣೆ ದೇಶದಲ್ಲಿ 7 ಹಂತಗಳಲ್ಲಿ ನಡೆದಿದ್ದು ರಾಜ್ಯದಲ್ಲಿ ಎರಡನೇ ಹಾಗೂ ಮೂರನೇ ಹಂತದಲ್ಲಿ ಚುನಾವಣೆ ನಡೆದಿದ್ದು ದಾವಣಗೆರೆ ಲೋಕಸಭಾ ಚುನಾವಣೆಗೆ ಮೇ 7 ರಂದು ಮತದಾನ ನಡೆದಿತ್ತು. ಜೂನ್ 4 ರಂದು ದಾವಣಗೆರೆ ವಿಶ್ವವಿದ್ಯಾನಿಯದಲ್ಲಿ ಮತ ಎಣಿಕೆ ನಡೆಯಿತು.
ಕಾಂಗ್ರೆಸ್ ಪಕ್ಷದ ಡಾ;ಪ್ರಭಾ ಮಲ್ಲಿಕಾರ್ಜುನ್ ಅವರು ಅಂಚೆ ಮತಗಳು ಸೇರಿದಂತೆ 633059 ಮತಗಳನ್ನು ಪಡೆದು ಇವರ ಸಮೀಪ ಸ್ಪರ್ಧಿ ಬಿ.ಜೆ.ಪಿ.ಯ ಗಾಯತ್ರಿ ಸಿದ್ದೇಶ್ವರ್ ಅವರು 606965 ಮತಗಳನ್ನು ಪಡೆದ್ದು 26094 ಮತಗಳ ಅಂತರದಿಂದ ಡಾ; ಪ್ರಭಾ ಮಲ್ಲಿಕಾರ್ಜುನ್ ಜಯಶಾಲಿಯಾಗಿದ್ದಾರೆ.
ಕ್ಷೇತ್ರದಲ್ಲಿ 8 ವಿಧಾನಸಭಾ ಕ್ಷೇತ್ರಗಳಿಂದ 1709244 ಒಟ್ಟು ಮತದಾರರಲ್ಲಿ 1315746 ಮತದಾರರು ಮೇ 7 ರಂದು ಮತದಾನ ಮಾಡಿದ್ದರು. ಮತ ಎಣಿಕೆಯನ್ನು ಪ್ರತಿ ಕ್ಷೇತ್ರದಲ್ಲಿ 14 ಟೇಬಲ್‍ಗಳಲ್ಲಿ ಎಣಿಕೆ ನಡೆಸಲಾಗಿರುತ್ತದೆ.
ಪಕ್ಷವಾರು, ಕಣದಲ್ಲಿದ್ದ ಅಭ್ಯರ್ಥಿಗಳು ಪಡೆದ ಮತಗಳ ವಿವರ.
- ಬಿ.ಜೆ.ಪಿ. ಗಾಯಿತ್ರಿ ಸಿದ್ದೇಶ್ವರ್ 606965
- ಕಾಂಗ್ರೆಸ್ ಪಕ್ಷದ ಡಾ; ಪ್ರಭಾ ಮಲ್ಲಿಕಾರ್ಜುನ್ 633059
- ಡಿ.ಹನುಮಂತಪ, ಬಹುಜನ ಸಮಾಜ ಪಾರ್ಟಿ 4475
- ಈಶ್ವರ ಶೇಂಗಾ, ಉತ್ತಮ ಪ್ರಜಾಕೀಯ ಪಾರ್ಟಿ 1430
- ಅಣಬೇರು ತಿಪ್ಪೇಸ್ವಾಮಿ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) 849
- ಎಂ.ಪಿ.ಖಲಂದರ್, ಕಂಟ್ರಿ ಸಿಟಿಜನ್ ಪಾರ್ಟಿ 539
- ದೊಡ್ಡೇಶಿ ಹೆಚ್.ಎಸ್, ಜನಹಿತ ಪಕ್ಷ 440
- ರುದ್ರೇಶ್ ಕೆ.ಹೆಚ್, ಸಮಾಜ ವಿಕಾಸ ಕ್ರಾಂತಿ ಪಾರ್ಟಿ 348
- ವಿರೇಶ್.ಎಸ್ (ಲಯನ್ ವಿರೇಶ್), ರಾಣಿ ಚೆನ್ನಮ್ಮ ಪಾರ್ಟಿ 459
- ಕೆ.ಎಸ್.ವೀರಭದ್ರಪ್ಪ, ಕರ್ನಾಟಕ ರಾಷ್ಟ್ರ ಸಮಿತಿ 475
- ಎಂ.ಜಿ.ಶ್ರೀಕಾಂತ್, ನವಭಾರತ ಸೇನಾ 560
- ಎಂ.ಸಿ.ಶ್ರೀನಿವಾಸ್, ಭಾರತೀಯ ಪ್ರಜಾಗಳ ಕಲ್ಯಾಣ ಪಕ್ಷ 974
- ಪಕ್ಷೇತರರಾದ ಅಬ್ದುಲ್ ನಜೀರ್ ಅಹಮೆದ್ 652
- ಎ.ಕೆ.ಗಣೇಶ್ 1055
- ಜಿ.ಎಂ.ಗಾಯಿತ್ರಿ ಸಿದ್ದೇಶಿ 2462
- ಟಿ.ಚಂದ್ರು 3049
- ಟಿ.ಜಬೀನಾ ಆಪಾ 5122
- ತಸ್ಲೀಮ್ ಬಾನು 4140
- ಪರವೀಜ್ ಹೆಚ್. 1868
- ಪೆದ್ದಪ್ಪ.ಎಸ್ 513
- ಬರಕತ್ ಅಲಿ 409
- ಜಿ.ಎಂ.ಬರ್ಕತ್ ಅಲಿ ಬಾಷ 472
- ಮಹಬೂಬ್ ಬಾಷ 306
- ಮೊಹ್ಮದ್ ಹಯಾತ್.ಎಂ, 723
- ಮಂಜು ಮಾರಿಕೊಪ್ಪ 379
- ರವಿನಾಯ್ಕ.ಬಿ. 319
- ರಷೀದ್ ಖಾನ್ 599
- ಜಿ.ಬಿ.ವಿನಯ್ ಕುಮಾರ್ 42907
- ಸಲೀಂ.ಎಸ್. 800
- ಸೈಯದ್ ಜಬೀವುಲ್ಲಾ.ಕೆ 843
- ನೊಟಾ 3173 ಮತಗಳು ಸೇರಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243