ದಿನದ ಸುದ್ದಿ
ಆರನೇ ಹಂತದ ಲೋಕಸಭಾ ಚುನಾವಣೆ ಮತದಾನ ಶಾಂತಿಯುತ
ಸುದ್ದಿದಿನ ಡೆಸ್ಕ್ : ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ನಡೆದ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ.
ಈ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಒಟ್ಟು 58 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಿತು. 5 ಗಂಟೆಯ ವೇಳೆಗೆ ಬಂದ ವರದಿಯ ಪ್ರಕಾರ, 6ನೇ ಹಂತದ 58 ಕ್ಷೇತ್ರಗಳಲ್ಲಿ ಒಟ್ಟಾರೆ ಶೇಕಡ 57.70 ರಷ್ಟು ಮತದಾನವಾಗಿದೆ.
ಬಿಹಾರದಲ್ಲಿ ಶೇಕಡ 52.24, ಜಾರ್ಖಂಡ್‌ನಲ್ಲಿ ಶೇಕಡ 61.41, ಹರ್ಯಾಣzಲ್ಲಿ ಶೇಕಡ 55.93, ಒಡಿಶಾದಲ್ಲಿ ಶೇಕಡ 59.60, ಉತ್ತರಪ್ರದೇಶದಲ್ಲಿ 52.02 ಮತ್ತು ಪಶ್ಚಿಮಬಂಗಾಳದಲ್ಲಿ 77.99, ದೆಹಲಿಯಲ್ಲಿ 53.73 ಹಾಗೂ ಜಮ್ಮು-ಕಾಶ್ಮೀರದಲ್ಲಿ ಶೇಕಡ 51.35ರಷ್ಟು ಮತದಾನವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243