ದಿನದ ಸುದ್ದಿ
‘ಕಾಡು ಬಿಟ್ಟು ನಾಡಿಗೆ ಬಂದ ಆನೆಗಳ ಹಿಂಡು’ ಮಾಡಿದ್ದೇನು ಗೊತ್ತಾ..!? ವಿಡಿಯೋ ನೋಡಿ
ಸುದ್ದಿದಿನ,ಮಂಡ್ಯ : ಜಿಲ್ಲೆಯ ಮದ್ದೂರು ತಾಲ್ಲೂಕು ಕೆ.ಕೋಡಿಹಳ್ಳಿ ಗ್ರಾಮಕ್ಕೆ ರಾತ್ರಿ ನಾಲ್ಕೈದು ಆನೆಗಳ ಹಿಂಡು ಆಗಮಿಸಿ ಭತ್ತ,ರಾಗಿ, ಕಬ್ಬು ಇನ್ನೂ ಮುಂತಾದ ಬೆಳೆಗಳನ್ನು ನಾಶ ಪಡಿಸಿ ನಂತರ ಶಿಂಷಾ ನದಿಯಲ್ಲಿ ಬೀಡು ಬಿಟ್ಟಿವೆ.
ರಾತ್ರಿಯೇ ಮುತ್ತತ್ತಿ ಅಥವಾ ಬಸವನ ಬೆಟ್ಟದ ಕಾಡಿನ ಕಡೆಯಿಂದ ಆಗಮಿಸಿರುವ ಮಾಹಿತಿ ಇದ್ದು ಇಗ್ಗಲೂರು ಕೆ.ಹೊನ್ನಲಗೆರೆ ಮಾರ್ಗವಾಗಿ ಆನೆಗಳು ಬಂದಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಬೆಳಿಗ್ಗೆ 10ಗಂಟೆಯಾದರು ಸ್ಥಳಕ್ಕೆ ಅರಣ್ಯ ಇಲಾಖೆ ಅಥವಾ ಪೋಲೀಸ್ ಇಲಾಖೆ , ತಾಲ್ಲೂಕು ಆಡಳಿತವಾಗಲಿ ಯಾರು ಸಹ ಆಗಮಿಸಿರದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಆನೆಗಳ ಹಿಂಡು ಬೆಳೆಗಳನ್ನು ನಾಶ ಪಡಿಸಿರುವುದಕ್ಕೆ ಅಧಿಕಾರಿಗಳು ತಕ್ಷಣವೇ ಪರಿಹಾರ ನೀಡಬೇಕು ಎಂದು ಸೋಮನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಪ್ಪೇಗೌಡ ರವರು ಆಗ್ರಹಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401