ದಿನದ ಸುದ್ದಿ

ಶ್ವಾಸಕೋಶ ಸೋಂಕಿನಿಂದ ಗಿರ್ ಅರಣ್ಯದಲ್ಲಿ 11 ಸಿಂಹಗಳು ಸಾವು; ಉಳಿದ ಸಿಂಹಗಳಿಗೆ ಲಸಿಕೆ

Published

on

ಸುದ್ದಿದಿನ ದೆಹಲಿ: ರಾಷ್ಟ್ರೀಯ ಉದ್ಯಾನ ಗಿರ್ ಅರಣ್ಯದಲ್ಲಿ 11 ಸಿಂಹಗಳು ಸಾವನ್ನಪ್ಪಿದ್ದು, ದಿಢೀರನೆ ಸಿಂಹಗಳು ಮೃತಪಟ್ಟಿದರ ರಾಜ್ಯ ಸರ್ಕಾರಕ್ಕೆ ಆತಂಕ ಉಂಟುಮಾಡಿದೆ. ಸಿಂಹಗಳ ಸಾವಿಗೆ ಕಾರಣ ಪತ್ತೆ ಹಚ್ಚಲು ಸರ್ಕಾರ ಸೂಚನೆ‌ ನೀಡಿದೆ. ಗಿರ್ ಅರಣ್ಯ ಪ್ರದೇಶದಲ್ಲಿ ಮೃತಪಟ್ಟ ಬಹುತೇಕ ಸಿಂಹಗಳು ಶ್ವಾಸಕೋಶ ಸಮಸ್ಯೆಯಿಂದ ಮೃತಪಟ್ಟಿರಬಹುದು. ಶ್ವಾಸಕೋಶ ಸಮಸ್ಯೆ ಕೆಲವು ಸಿಂಹಗಳಲ್ಲಿ ಕಂಡುಬಂದಿದೆ. ಶ್ವಾಸಕೋಶ ಸಮಸ್ಯೆ ಸೋಂಕು ಇತರ ಸಿಂಹಗಳಿಗೂ ಹರಡಿದ್ದರಿಂದ ಅವುಗಳು ಸಾವನ್ನಪ್ಪಿರಬಹುದು ಎಂಬ ಶಂಕಿಸಲಾಗಿದೆ ಎಂದು ಅರಣ್ಯ ಇಲಾಖೆಯ ಪಶುವೈದ್ಯ ಹಿತೇಶ್ ವಮ್ಜಾ ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಉಳಿದ ಸಿಂಹಗಳು ಹಾಗೂ ಹುಲಿಗಳನಯ ಉಳಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಂಡಿದೆ. ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಅರಣ್ಯ ಇಲಾಖೆ ಅಧಿಕಾರಿಗಳು ಶ್ವಾಸಕೋಶ ಸೋಂಕು ಇತರ ಸಿಂಹಗಳಿಗೆ ಹರಡದಂತೆ ಕ್ರಮ ಅಗತ್ಯವಿದೆ. ಈಗಾಗಲೇ ಉಳಿದ ಸಿಂಹಗಳಿಗೆ ಸೋಂಕು ಹರಡದಂತೆ ಲಸಿಕೆ ಹಾಕಲಾಗಿದೆ. ಲಸಿಕೆ ಹಾಕುವುದರಿಂದ ಸಿಂಹಗಳ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

Trending

Exit mobile version