ದಿನದ ಸುದ್ದಿ

3.36 ಲಕ್ಷ ಕೋಟಿಗೆ ‘ಟ್ವಿಟರ್’ ಖರೀದಿಸಿದ ಉದ್ಯಮಿ ಎಲಾನ್ ಮಸ್ಕ್..!

Published

on

ಸುದ್ದಿದಿನ ಡೆಸ್ಕ್ : ಸಾಮಾಜಿಕ‌ ಜಾಲತಾಣ ಟ್ವಿಟರ್ ಅನ್ನು ಟೆಸ್ಲಾ ಖ್ಯಾತಿಯ ಉದ್ಯಮಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಎಲಾನ್ ಮಸ್ಕ್ ಅವರು 3.36 ಲಕ್ಷ ಕೋಟಿಗೆ (44 ಬಿಲಿಯನ್‌ ಡಾಲರ್) ಖರೀದಿ ಮಾಡಿದ್ದಾರೆ.

ಉದ್ಯಮಿ ಎಲಾನ್‌ ಮಸ್ಕ್‌ ಟ್ವಿಟ್ಟರ್‌ನಲ್ಲಿ ಶೇ.9.2ರಷ್ಟು ಷೇರನ್ನಿ ಹೊಂದಿದ್ದು, ನಂತರ ಪ್ರತಿ ಷೇರಿಗೆ 54.20 ಡಾಲರ್‌ (4,149) ನಂತೆ ಪಾವತಿಸಿ, ಪೂರ್ತಿ ಪಾಲು ಖರೀದಿಗೆ ಇಂಗಿತ ವ್ಯಕ್ತಪಡಿಸಿದ್ದರು. ಈಗ ಮಸ್ಕ್‌ ಖರೀದಿ ಪ್ರಸ್ತಾಪಕ್ಕೆ ಟ್ವಿಟ್ಟರ್‌ ಆಡಳಿತ ಮಂಡಳಿ ಒಪ್ಪಿದ್ದು , ವ್ಯಾಪಾರಕ್ಕೆ ಅಂತಿಮ ಮುದ್ರೆಯನ್ನು ಒತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version