ದಿನದ ಸುದ್ದಿ
ಮತ್ತೆ ಫ್ರಾನ್ಸ್ ಅಧ್ಯಕ್ಷರಾಗಿ ಎಮ್ಯಾನುಯೆಲ್ ಮ್ಯಾಕ್ರನ್
ಸುದ್ದಿದಿನ ಡೆಸ್ಕ್ : ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ ಶೇಕಡ58.2ರಷ್ಟು ಮತಗಳೊಂದಿಗೆ ಎರಡನೇ ಅವಧಿಗೆ ಚುನಾಯಿತರಾಗಿದ್ದಾರೆ.
ಮ್ಯಾಕ್ರನ್ ಅವರ ಬಲಪಂಥೀಯ ಸ್ಪರ್ಧಿ ಮರೀನ್ ಲೆ ಪೆನ್ ಚುನಾವಣೆಯಲ್ಲಿ ಶೇಕಡ 41.8ರಷ್ಟು ಮತಗಳನ್ನು ಗಳಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಈ ಮೂಲಕ 50ವರ್ಷಗಳಲ್ಲೇ ಅತಿಹೆಚ್ಚು ಸಂಖ್ಯೆಯಲ್ಲಿ ಗೈರು ಹಾಜರಾತಿಯೊಂದಿಗೆ ಚುನಾವಣೆ ನಡೆದಿದೆ. ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆಗೆ ಫ್ರಾನ್ಸ್ ನಾದ್ಯಂತ ಮತದಾನ ಮುಕ್ತಾಯಗೊಂಡಿದೆ.
ಅಂತಿಮ ಫಲಿತಾಂಶವನ್ನು ದೇಶದ ಆಂತರಿಕ ಸಚಿವಾಲಯ ಇಂದು ಪ್ರಕಟಿಸಲಿದೆ. 44 ವರ್ಷ ಮ್ಯಾಕ್ರನ್, ಎರಡು ದಶಕಗಳ ಹಿಂದೆ ಚಿರಾಕ್ ನಂತರ ಎರಡನೇ ಅವಧಿಗೆ ಅಧ್ಯಕ್ಷರಾಗುತ್ತಿರುವ ಮೊದಲಿಗರಾಗಿದ್ದಾರೆ.
ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮ್ಯಾಕ್ರನ್ ಗೆದ್ದ ನಂತರ ಎಲ್ಲಡೆಯಿಂದ ಅಭಿನಂದನೆಗಳು ಹರಿದುಬಂದಿವೆ.
Chacun d'entre nous compte plus que lui-même. C’est ce qui fait du peuple français cette force singulière que j'aime si profondément, si intensément, et que je suis si fier de servir à nouveau. pic.twitter.com/02EtTJVdis
— Emmanuel Macron (@EmmanuelMacron) April 24, 2022
Ce projet, je le porterai avec vous. pic.twitter.com/DruhuhWNA6
— Emmanuel Macron (@EmmanuelMacron) April 24, 2022
La Marseillaise. 🇫🇷 pic.twitter.com/j94iGyXdyg
— Emmanuel Macron avec vous (@avecvous) April 24, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243