ಲೈಫ್ ಸ್ಟೈಲ್
ವೈರಲ್ ಆಯ್ತು ಎಂಗೇಜ್ಮೆಂಟ್ ಪಿಯರ್ಸಿಂಗ್ ರಿಂಗ್ ಫ್ಯಾಷನ್..!
ಪ್ರೇಮಾಂಕುರ ವಾದೊಡನೆಯೇ ಸುಂದರಿಯ ಕೈ ಬೆರಳಿಗೆ ಉಂಗುರ ತೊಡಿಸಿ, ಪ್ರೇಮ ನಿವೇದನೆ ಮಾಡುವುದು ಸಾಮಾನ್ಯ. ಆದರೆ ಇಂದಿನ ಹೈಟೆಕ್ ಯುಗದಲ್ಲಿ , ಚಿನ್ನದ ಆಭರಣಗಳ ಮೋಹ ಕಳೆದುಕೊಳ್ಳುತ್ತಿರುವ ಯುವ ಜನಾಂಗ, ಟ್ಯಾಟೂ ಕ್ರೇಜ್ ಮೈ ಗಿಟ್ಟಿಸಿಕೊಂಡಿದೆ. ಎಂಗೇಜ್ಮೆಂಟ್ ರಿಂಗ್ ಜಾಗವನ್ನ, ಎಂಗೇಜ್ಮೆಂಟ್ ರಿಂಗ್ ಟ್ಯಾಟೂ ಆಕ್ರಮಿಸಿಕೊಂಡಿದೆ. ರಿಂಗ್ ಬದಲಾಯಿಸಿಕೊಳ್ಳುವ ಬದಲು, ಹುಡುಗ-ಹುಡುಗಿಯರಿಬ್ಬರೂ ರಿಂಗ್ ಟ್ಯಾಟೂ ಮೊರೆ ಹೋಗುತ್ತಿದ್ದಾರೆ.
ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಪ್ರೇಮಿಗಳು ಫಿಂಗರ್ ಪಿಯರ್ಸಿಂಗ್ ಎಂಗೇಜ್ಮೆಂಟ್ ರಿಂಗ್ ಎಂಬ ಹೊಸಾ ಫ್ಯಾಷನ್ ಸೃಷ್ಟಿಸಿದ್ದಾರೆ. ವಜ್ರ,ಚಿನ್ನದ ರಿಂಗ್ ಬದಲು, ವಜ್ರದ ಸ್ಟಡ್ , ಚಿನ್ನ-ಬೆಳ್ಳಿಯ ಸ್ಟಡ್ ಗಳನ್ನು ಬೆರಳಿಗೆ ಶಾಶ್ವತವಾಗಿ ಚುಚ್ಚಲಾಗುತ್ತದೆ. ಫಿಂಗರ್ ರಿಂಗ್ ಪಿಯರ್ಸಿಂಗ್ ಸದ್ಯ ಟ್ರೆಂಡಿಂಗ್ ಫ್ಯಾಷನ್ ಸಾಲಿಗೆ ಸೇರಿದ್ದು ನೂತನ ಶೈಲಿಯ ಎಂಗೇಜ್ಮೆಂಟ್ ರಿಂಗ್ ( ಪಿಯರ್ಸಿಂಗ್) ಯುವಪೀಳಿಗೆ ಯಲ್ಲಿ ಸಾಕಷ್ಟು ಫ್ಯಾಷನ್ ಸಂಚಲನ ಮೂಡಿಸಿದೆ.
ಈ ರೀತಿಯ ಫಿಂಗರ್ ಪಿಯರ್ಸಿಂಗ್, ಶಾಶ್ವತ ವಾಗಿದ್ದು, ಇದರ ಗಾಯ ಕೂಡಾ ಶಾಶ್ವತ ವಾಗಿರುತ್ತದೆ. ಬಹಳ ಸೂಕ್ಷ್ಮ ವಾದ ಚರ್ಮ ವಾಗಿರುವ ಕೈ ಬೆರಳಿನ ಮೇಲೆ ಚುಚ್ಚಿಸುವುದು ಅಷ್ಟು ಸುಲಭವಲ್ಲ. ಅತಿಯಾದ ನೋವಿನಿಂದ ಕೂಡಿರುವ ಈ ಫಿಂಗರ್ ಪಿಯರ್ಸಿಂಗ್ ಯುವಪೀಳಿಗೆಯ ಫ್ಯಾಷನ್ ಕ್ರೇಜ್ ಗೆ ಸಾಕ್ಷಿ ಆಗಿದೆ.
–ಚಿತ್ರಶ್ರೀ ಹರ್ಷ
ಸುದ್ದಿದಿನ.ಕಾಂ|ವಾಟ್ಸಾಪ್|9980346243