ದಿನದ ಸುದ್ದಿ

ಸಂತೇಬೆನ್ನೂರು | ಈಶ್ವರೀ ವಿ ವಿ ಯಲ್ಲಿ ಇಂಜಿನಿಯರ್ಸ್ ಡೇ ಆಚರಣೆ

Published

on

ಸುದ್ದಿದಿನ,ಚನ್ನಗಿರಿ:ತಾಲ್ಲೂಕಿನ ಸಂತೇಬೆನ್ನೂರು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಇಂಜಿನಿಯರ್ಸ್ ದಿನಾಜರಣೆಯನ್ನು ದೀಪ ಬೆಳಗಿಸುವ ಮೂಲಕ ಆಚರಿಸಲಾಯಿತು . ಸರ್ ಎಂ ವಿಶ್ವೇಶ್ವರಯ್ಯ ಅವರ ಸೇವೆ, ಸಾಧನೆ, ಕೊಡುಗೆಗಳನ್ನು ಸ್ಮರಿಸಿ , ಪ್ರಸ್ತುತ ಅಭಿಯಂತರರ ಸೇವೆಯಲ್ಲಿ ತೊಡಗಿರುವವರು ದೇಶದ ಸುಭದ್ರತೆಗೆ ಉತ್ತಮ ಸೇವೆ ನೀಡಲಿ ಎಂದು ಆಶಿಸಲಾಯಿತು.

ಕಾರ್ಯಕ್ರಮದಲ್ಲಿ ಅಭಿಯಂತರರುಗಳಾದ ಜಗದೀಶ್, ಮಹೇಶ್ವರಪ್ಪ, ಈಶ್ವರಿ ಕೇಂದ್ರದ ಸಂಚಾಲಕರು ಮಮತಾಕ್ಕ, ಪೋಸ್ಟ್ ಮಾಸ್ಟರ್ ನಾಗೇಂದ್ರಪ್ಪ, ಹೊನ್ನಮ್ಮ ಇತರರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version