ಕ್ರೀಡೆ

ವೇಗಿಗಳ ದಾಳಿಗೆ ಇಂಗ್ಲೆಂಡ್ ಧೂಳಿಪಟ; 203 ರನ್ ಗಳ ಗೆಲುವು ಕಂಡ ಭಾರತ

Published

on

ಸುದ್ದಿದಿನ,ನಾಟಿಂಗ್ ಹ್ಯಾಮ್: ಭಾರತದ ಸ್ವಿಂಗ್ ಬೌಲರ್ ಗಳ ದಾಳಿಗೆ ತತ್ತರಿಸಿದ ಆತಿಥೇಯ ಇಂಗ್ಲೆಂಡ್ ಹೀನಾಯ ಸೋಲು ಕಂಡಿದೆ. ಭಾರತ 203 ರನ್ ಗಳ ಅಂತರದಲ್ಲಿ ದೊಡ್ಡ ಜಯ ದಾಖಲಿಸಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತ ತಂಡ ಅಧಿಕಾರಯುತ ಗೆಲುವು ಪಡೆಯಿತು. 3 ನೇ ಪಂದ್ಯ ಗೆದ್ದ ಭಾರತ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-2 ರಿಂದ ಖಾತೆ ತೆರೆದಿದ್ದು ಸರಣಿಯನ್ನು ಜೀವಂತವಾಗಿರಿಸಿದೆ. ಈ ಗೆಲುವು ಎಡ್ಜ್ ಬಸ್ಟನ್ ಮತ್ತು ಲಾರ್ಡ್ಸ್ ನಲ್ಲಿ ಎದುರಾಗಿದ್ದ ಸೋಲಿನ ಆಘಾತ ದಿಂದ ಭಾರತ ಚೇತರಿಸಿಕೊಂಡಂತಾಗಿದೆ.
4 ನೇ ದಿನದಂತ್ಯಕ್ಕೆ 9 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್, ಗೆಲುವಿಗಾಗಿ 200 ಕ್ಕೂ ಹೆಚ್ಚು ರನ್ ಗಳಿಸಬೇಕಿತ್ತು. 5 ನೇ ದಿನವಾದ ಬುಧವಾರ ದ್ವಿತೀಯ ಇನ್ನಿಂಗ್ಸ್‌ ಮುಂದುವರೆಸಿದ ಇಂಗ್ಲೆಂಡ್ ಕೇವಲ 2.5 ಓವರ್ ನಲ್ಲಿ ಉಳಿದ 1 ವಿಕೆಟ್ ನ್ನು ಕಳೆದುಕೊಂಡಿತು. 317 ರನ್ ಗಳಿಗೆ ಇಂಗ್ಲೆಂಡ್ ಸರ್ವಪತನ ವಾಯಿತು. ಇಂಗ್ಲೆಂಡ್ ಗೆ 521 ರನ್ ಗಳ ಗುರಿ ಪಡೆದಿತ್ತು.
ಜೇಮ್ಸ್ ಆ್ಯಂಡರ್ ಸನ್ (11) ಕೊನೆಯ ವಿಕೆಟ್ ರೂಪದಲ್ಲಿ ಔಟ್ ಆದರು. ಅಶ್ವಿನ್ ಬೌಲಿಂಗ್ ನಲ್ಲಿ ಆ್ಯಂಡರ್ಸನ್, ರಹಾನೆ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
ಪಂದ್ಯದ 2 ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ತೋರಿದರು. 2 ಇನ್ನಿಂಗ್ಸ್‌ನಲ್ಲಿ ಮೊದಲ ವಿಕೆಟ್ ಗೆ ಭಾರತ 60 ರನ್ ಗಳ ಜತೆಯಾಟ ನಿರ್ವಹಿಸಿತ್ತು. ಅಲ್ಲದೇ ವೇಗಿಗಳಾದ ಇಶಾಂತ್ ಶರ್ಮಾ (2/32 ಮತ್ತು 2/70) ಹಾಗೂ ಮೊಹಮದ್ ಶಮಿ (1/56 ಮತ್ತು (1/78) ಉತ್ತಮ ಆಟವಾಡಿದ್ದರು. ಹೀಗಾಗಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ (81) ಮತ್ತು ಟೆಸ್ಟ್‌ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 2 ನೇ ಇನ್ನಿಂಗ್ಸ್‌ನಲ್ಲಿ (79) ರನ್ ಗಳಿಸಿದ್ದರು.ಹಾರ್ದಿಕ್ ಪಾಂಡ್ಯ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಮತ್ತು ಅರ್ಧಶತಕ ಗಳಿಸಿ ಆಲ್ರೌಂಡರ್ ಪ್ರದರ್ಶನ ದಿಂದ ಭಾರತ ದೊಡ್ಡ ಮೊತ್ತದ ಸವಾಲನ್ನು ಇಂಗ್ಲೆಂಡ್ ಗೆ ನೀಡಲು ನೆರವಾಯಿತು.
ಕನ್ನಡಿಗ ಕೆ. ಎಲ್. ರಾಹುಲ್ ಕ್ಷೇತ್ರ ರಕ್ಷಣೆ ಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದು ಭಾರತಕ್ಕೆ ಪ್ಲಸ್ ಪಾಯಿಂಟ್ ಆಯಿತು. ರಾಹುಲ್ 7 ಕ್ಯಾಚ್ ಹಿಡಿದರು. ಈ ಮೂಲಕ ಸ್ಲಿಪ್ ಕ್ಷೇತ್ರ ರಕ್ಷಣೆಯಲ್ಲಿ ಭಾರತ ತಂಡಕ್ಕೆ ಪ್ರಬಲ ಆಟಗಾರನೊಬ್ಬ ದೊರೆತಂತಾಗಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ನಲ್ಲಿ ಮಿಂಚಿದ್ದ ರಿಶಭ್ ಪಂತ್, ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ವಿಕೆಟ್‌ ಕೀಪಿಂಗ್ ನಲ್ಲಿ ಭರವಸೆ ಮೂಡಿಸಿದ್ದಾರೆ. ಧೋನಿ ನಂತರದ ಕೀಪರ್ ಯಾರು ಎಂಬ ಪ್ರಶ್ನೆಗೆ ರಿಶಭ್ ಉತ್ತರ ವಾಗಿ ಕಾಣುತ್ತಿದ್ದಾರೆ.
ಇನ್ನೂ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಸರಣಿಯಲ್ಲಿ ಅದ್ಭುತ ಬ್ಯಾಟಿಂಗ್ ನಿಂದ ಗಮನಸೆಳೆಯುತ್ತಿದ್ದಾರೆ. 3 ಪಂದ್ಯ ಗಳಿಂದ ಕೊಹ್ಲಿ 440 ರನ್ ಗಳಿಸಿದ್ದಾರೆ. 3 ನೇ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 97 ಮತ್ತು 2 ನೇ ಇನ್ನಿಂಗ್ಸ್‌ನಲ್ಲಿ 103 ರನ್ ಗಳಿಸಿದ್ದಾರೆ. ಕೊಹ್ಲಿ ಮೊದಲ ಟೆಸ್ಟ್‌ ನಲ್ಲಿ 200 ಮತ್ತು 3 ನೇ ಟೆಸ್ಟ್‌ ನಲ್ಲೂ 200 ರನ್ ಗಳಿಸಿದ್ದಾರೆ.
3 ಪಂದ್ಯಗಳಿಂದ ಕೊಹ್ಲಿ 2 ಶತಕ ಮತ್ತು 2 ಅರ್ಧ ಶತಕ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version