ಕ್ರೀಡೆ
ಇಂಗ್ಲೆಂಡಿನ ಆಲ್ ರೌಂಡರ್ ‘ಮೋಯಿನ್ ಅಲಿ’ ಗೆ ಎದುರಾಗಿತ್ತು ಜನಾಂಗೀಯ ನಿಂದನೆ..!
ಆತ್ಮಕಥೆಯಲ್ಲಿ ಹೇಳಿಕೊಂಡಿರುವ ಆಲ್ ರೌಂಡರ್ ಕ್ರಿಕೆಟಿಗ
ಸುದ್ದಿದಿನ ಡೆಸ್ಕ್: ಇಂಗ್ಲೆಂಡ್‌ನ ಆಲ್ ರೌಂಡರ್ ಕ್ರಿಕೆಟಿಗ ಮೊಯೆನ್ ಅಲಿ ತಮಗೆ ಜನಾಂಗೀಯ ನಿಂದನೆ ಮಾಡಲಾಗಿದೆ ಎಂದು ಜೀವನ ಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. 2015ರಲ್ಲಿ ಕಾರ್ಡಿಫ್ ನಲ್ಲಿ ನಡೆದ ಆಶಿಸ್ ಸರಣಿಯ ಪಂದ್ಯದ ವೇಳೆ ಆಸ್ಟ್ರೇಲಿಯಾದ ಆಟಗಾರನೊಬ್ಬ ಮೊಯಿನ್ ಅಲಿಯನ್ನು ನೀನೊಬ್ಬ ‘ಒಸಾಮಾ’ ಎಂದು ಕರೆದಿದ್ದಾನೆ ಎಂದು ಬಹಿರಂಗ ಪಡಿಸಿದ್ದಾರೆ.
ಭಾರತದ-ಇಂಗ್ಲೆಂಡ್ 5-ಪಂದ್ಯಗಳ ಸರಣಿಯ ನಾಲ್ಕನೆಯ ಟೆಸ್ಟ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಸೋಲುವಂತೆ ಆಟವಾಡಿದ್ದ ಮೊಯಿನ್ ಆತ್ಮಚರಿತ್ರೆಯಲ್ಲಿ ಬಹಿರಂಗಪಡಿಸಿದ್ದಾರೆ. ಅಲಿಯ ಬಯೋಗ್ರಫಿಯನ್ನು ಲಂಡನ್ನಿನ ದಿ ಟೈಮ್ಸ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸುತ್ತಿದೆ.
ಇದರಲ್ಲಿ ಅಲಿ ಹೀಗೆ ಬರೆದಿದ್ದಾರೆ; “ಇದು ನನ್ನ ವೈಯಕ್ತಿಕ ಪ್ರದರ್ಶನದ ದೃಷ್ಟಿಯಿಂದ ಇದೊಂದು ಉತ್ತಮ ಪರೀಕ್ಷೆಯಾಗಿದ್ದರೂ ನನ್ನ ಗಮನವನ್ನು ಒಂದು ಘಟನೆ ವಿಚಲಿತಗೊಳಿಸಿತು. ಅದೇನೆಂದರೆ, ಆಸ್ಟ್ರೇಲಿಯಾದ ಆಟಗಾರನೊಬ್ಬ ಮೈದಾನದಲ್ಲಿ ನನ್ನ ಕಡೆಗೆ ತಿರುಗಿ “ಒಸಾಮಾ ಇದನ್ನು ತೆಗೆದುಕೊ” ಎಂದು ಹೇಳಿದ. ಆದರೆ, ನಾನು ಎಂದಿಗೂ ಕೋಪಗೊಳ್ಳಲಿಲ್ಲ. ಬದಲಿಗೆ ಆಸ್ಟ್ರೇಲಿಯಾದ ಕೋಚ್ ಡ್ಯಾರೆನ್ ಲೆಹ್ಮನ್ ಬಳಿ ಹೇಳಿದೆ. ಇದನ್ನು ಅವರು ಆಟಗಾರನ ಬಳಿ ಕೇಳಿದಾಗ ಇಲ್ಲವೆಂದು ಅಲ್ಲಗಳೆದರು ಎಂದು ಹೇಳಿಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401