ದಿನದ ಸುದ್ದಿ

ವಿಕಲಚೇತನ ಫಲಾನುಭವಿ ಮಾಹಿತಿ ನಮೂದಿಗೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ: ವಿಕಲಚೇತನರ ಕಲ್ಯಾಣ ನಿರ್ದೇಶನಾಲಯದ ವತಿಯಿಂದ ಜಿಲ್ಲಾ ಮಟ್ಟದಲ್ಲಿ ವಿಕಲಚೇತನ ಫಲಾನುಭವಿಗಳ ಮಾಹಿತಿಯನ್ನು ನಮೂದಿಸಲು (ಡಾಟಾ ಬೇಸ್) ಇ-ಆಡಳಿತ ಕೇಂದ್ರವು ಅಪ್ಲಿಕೇಷನ್ ತಯಾರಿಸಿ ಒದಗಿಸಿದ್ದು ಈ ಅಪ್ಲಿಕೇಷನ್‍ನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಮಾಹಿತಿ ನಮೂದು ಪ್ರಾರಂಭವಾಗಿರುತ್ತದೆ.

ದಾವಣಗೆರೆ ನಗರ ಪ್ರದೇಶದ ಈಗಾಗಲೇ ಅಂಗವಿಕಲರ ಗುರುತಿನ ಚೀಟಿ/ಯು.ಡಿ.ಐ.ಡಿ ಕಾರ್ಡ್ ಹೊಂದಿರುವ ಹಾಗೂ ಮಾಸಾಶನ ಪಡೆಯುತ್ತಿರುವ ವಿಕಲಚೇತನರು ತಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ದಾಖಲೆಗಳನ್ನು ಮಹಾನಗರಪಾಲಿಕೆ ದಾವಣಗೆರೆ ಕಛೇರಿಯಲ್ಲಿರುವ ನಗರ ಪುನರ್ವಸತಿ ಕಾರ್ಯಕರ್ತರು (ಯು.ಆರ್.ಡಬ್ಲ್ಯೂ) ನ್ನು ಬೇಟಿ ಮಾಡಿ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

ಇದನ್ನೂ ಓದಿ | ದಾವಣಗೆರೆ | ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಇ-ಆಡಳಿತ ಕೇಂದ್ರದ ಅರ್ಜಿಯಲ್ಲಿ ತಮ್ಮ ಸಂಪೂರ್ಣ ಮಾಹಿತಿಯು ನಮೂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತಮ್ಮ ಮಾಸಾಶನ ನಿಲ್ಲಿಸುವುದರ ಜೊತೆಗೆ ಸರ್ಕಾರಿ ಸೌಲಭ್ಯಗಳನ್ನು ತಡೆಹಿಡಿಯಲಾಗುವುದು. ಆದ ಕಾರಣ ದಾವಣಗೆರೆ ನಗರ ಪ್ರದೇಶದ ವಿಕಲಚೇತನರು ತಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್, ಅಂಗವಿಕಲರ ಗುರುತಿನ ಚೀಟಿಯೊಂದಿಗೆ ತುರ್ತಾಗಿ ಈ ಕೆಳಕಂಡ ಯು.ಆರ್.ಡಬ್ಲ್ಯೂ ಗಳಿಗೆ ದಾಖಲೆಗಳನ್ನು ಸಲ್ಲಿಸಲು ಈ ಮೂಲಕ ಸೂಚಿಸಿದೆ.

ಹೆಚ್ಚಿನ ಮಾಹಿತಿಗಾಗಿ ಪರಶುರಾಮ್ – 7353150170, ರತ್ನಮ್ಮ – 9620635242, ಕಮಲಮ್ಮ – 9980581755, ಮಂಜುನಾಥ – 9945154311 ದೂರವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಹಾಗೂ ವಿಕಲಚೇತನರ ಸಹಾಯವಾಣಿ ಮತ್ತು ಮಾಹಿತಿ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ 08192-263939 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version