ದಿನದ ಸುದ್ದಿ

ಎಸ್.ಸಿ ಮತ್ತು ಎಸ್.ಟಿ ಮಹಿಳಾ ಪದವೀಧರರಿಗೆ ಉದ್ಯಮಶೀಲತಾ ತರಬೇತಿ

Published

on

ಸುದ್ದಿದಿನ,ದಾವಣಗೆರೆ : ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 300 ಮಹಿಳಾ ಪದವೀಧರರಿಗೆ(200 ಪ.ಜಾ+100 ಪ.ಪಂ) ಉದ್ಯಮಗಳನ್ನು ಸ್ಥಾಪಿಸಲು ಪೂರಕವಾಗುವಂತೆ ಪ್ರತಿಷ್ಠಿತ ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ, ಬೆಂಗಳೂರು ಇಲ್ಲಿ ಉಚಿತ ಉದ್ಯಮಶೀಲತಾ ತರಬೇತಿಗಾಗಿ ಅಧಿಕೃತ ಜಾಲತಾಣ www.sw.kar.nic.in ರಲ್ಲಿ ಆನ್‍ಲೈನ್ ಮೂಲಕ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳಾ ಪದವೀಧರರಾಗಿರಬೇಕು ಮತ್ತು ರಾಜ್ಯದ ನಿವಾಸಿಯಾಗಿರಬೇಕು. ಗರಿಷ್ಠ 45 ವರ್ಷ ವಯೋಮಿತಿ ಹೊಂದಿರಬೇಕು, ತರಬೇತಿಯು ಆನ್‍ಲೈನ್ (ಸ್ವಯಂ ಗತಿಯು) ಮತ್ತು ಆಫ್‍ಲೈನ್ ತರಬೇತಿಯು ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ,(IIMB) ಬೆಂಗಳೂರು ರವರ ಕ್ಯಾಂಪಸ್‍ನಲ್ಲಿ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version