ದಿನದ ಸುದ್ದಿ

ಲ್ಯಾಪ್‍ಟಾಪ್‍ನಲ್ಲಿ ದೋಷ 52 ಸಾವಿರ ರೂ. ಪರಿಹಾರ

Published

on

ಸುದ್ದಿದಿನ,ಧಾರವಾಡ : ದೋಷಪೂರಿತ ಲ್ಯಾಪ್‍ಟಾಪ್ ಪೂರೈಸಿದ ಲೆನೆವೊ ಕಂಪನಿಗೆ ಸೇವಾ ನ್ಯೂನ್ಯತೆ ಪ್ರಕರಣದಡಿ ಖರೀದಿದಾರ ವಿದ್ಯಾರ್ಥಿಗೆ 52 ಸಾವಿರ ರೂ. ಪರಿಹಾರ ಒದಗಿಸಲು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.

ಧಾರವಾಡ ನಗರದ ಹತ್ತಿಕೊಳ್ಳದ ನಿವಾಸಿ ಮಹ್ಮದ್ ಪೀರಜಾದೆ ಎಂಬ ವಿದ್ಯಾರ್ಥಿ ಲೆನೆವೊ ಕಂಪನಿಯ ಲ್ಯಾಪ್‍ಟಾಪ್‍ನ್ನು 42,499 ರೂ.ಗಳಿಗೆ 2020 ರ ನವೆಂಬರ್ 22 ರಂದು ಖರೀದಿಸಿದ್ದರು. ಲ್ಯಾಪ್‍ಟಾಪ್‍ನಲ್ಲಿ ದೋಷ ಕಂಡು ಬಂದ ನಂತರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದರು.

ವಿಚಾರಣೆ ನಡೆಸಿದ ಆಯೋಗವು ಕಂಪನಿಯು ಸೇವಾ ನ್ಯೂನ್ಯತೆ ಎಸಗಿದೆ ಎಂದು ನಿರ್ಣಯಿಸಿ ಲ್ಯಾಪ್‍ಟಾಪ್ ಮೌಲ್ಯ 42,499, ಸೇವಾ ನ್ಯೂನ್ಯತೆಗಾಗಿ 10 ಸಾವಿರ ರೂ.ಗಳನ್ನು ಶೇ.9 ರ ಬಡ್ಡಿ ಸಹಿತವಾಗಿ ಪರಿಹಾರ ನೀಡಬೇಕೆಂದು ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿ.ಎ. ಬೋಳಶೆಟ್ಟಿ ಹಾಗೂ ಪಿ.ಸಿ. ಹಿರೇಮಠ ತೀರ್ಪು ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version