ದಿನದ ಸುದ್ದಿ
ಮತದಾರರ ಪಟ್ಟೀಲಿ ಸನ್ನಿ ಲಿಯೋನ್; ಅಧಿಕಾರಿಗಳ ಎಡವಟ್ಟು
ಸುದ್ದಿದಿನ ಡೆಸ್ಕ್: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಭರದಲ್ಲಿ ಸಾಗಿದೆ. ಪರಿಷ್ಕರಣೆ ಮಾಡುವ ಅವಸರದಲ್ಲಿ ಅಧಿಕಾರಿಗಳಿಂದ ಎಡವಟ್ಟಾಗಿವೆ. ಪ್ರಾಣಿ, ಪಕ್ಷಿಗಳಷ್ಟೇ ಅಲ್ಲ ಮಾಜಿ ಪೋರ್ನ್ ಸ್ಟಾರ್, ಮಾಡೆಲ್ ಸನ್ನಿ ಲಿಯೋನ್ ಮತದಾರರ ಪಟ್ಟಿಯಲ್ಲಿದ್ದಾರೆ.
ಮತದಾರರ ಪಟ್ಟಿಯಲ್ಲಿ ಫೋಟೊ ಬದಲಾವಣೆ ಆಗುವುದು ಸಾಮಾನ್ಯ. ಆದರೆ, ಉತ್ತರ ಪ್ರದೇಶದ ಮತದಾರ ಪಟ್ಟಿಯಲ್ಲಿ ದೊಡ್ಡ ತಪ್ಪುಗಳು ಆಗಿರುವುದು ಬೆಳಕಿಗೆ ಬಂದಿದೆ. ಇಂಟ್ರಸ್ಟಿಂಗ್ ವಿಷಯವೇನೆಂದರೆ ಮತದಾರರ ಪಟ್ಟಿಯಲ್ಲಿ ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಹೆಸರಿರುವುದು.
ಇಷ್ಟಲ್ಲದೇ ಪರಿವಾಳ, ಆನೆ, ಜಿಂಕೆ ಫೋಟೊಗಳು ಬಲಿಯಾ ಜಿಲ್ಲೆಯ ಮತದಾರರ ಅಂತಿಮ ಪಟ್ಟಿಯಲ್ಲಿ ಪ್ರಕಟಗೊಂಡಿವೆ. ಅಂತಿಮ ಪಟ್ಟಿ ಪರಿಶೀಲನೆ ಮಾಡಬೇಕಿದ್ದ ಅಧಿಕಾರಿ ಸರಿಯಾಗಿ ಗಮನಿಸದೇ ಇರುವುದರಿಂದ ಅಮೇರಿಕಾದ ಪ್ರಜೆಯಾಗಿರುವ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದಾರೆ. ಇದನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡೋದಾಗಿ ಅಧಿಕಾರಿಗಳು ಹೇಳಿದ್ದಾರೆ.