ರಾಜಕೀಯ
ಆಟಕ್ಕುಂಟು ಲೆಕ್ಕಕ್ಕಿಲ್ಲ ಕುಮಾರಸ್ವಾಮಿ : ಈಶ್ವರಪ್ಪ ವ್ಯಂಗ್ಯ
ಸುದ್ದಿದಿನ, ಮಂಗಳೂರು : “ಎಚ್.ಡಿ.ಕುಮಾರಸ್ವಾಮಿ ಆಟಕ್ಕುಂಟು, ಲೆಕ್ಕಕ್ಕಿಲ್ಲದ ಮುಖ್ಯಮಂತ್ರಿ. ಅವರಿಗೆ ಸ್ವ ನಿರ್ಣಯಗಳನ್ನು ತೆಗೆದುಕೊಳ್ಳುವ ಸ್ವತಂತ್ರವಿಲ್ಲ” ಎಂದು ಕೆ.ಎಸ್. ಈಶ್ಚರಪ್ಪ ವ್ಯಂಗವಾಡಿದ್ದಾರೆ.
ಇಂದು ಬೆಳಗ್ಗೆ (ಜೂನ್ 20) ಕುಕ್ಕೆ ಸುಬ್ರಹ್ಮಣ್ಯಕ್ಕೆ ಕುಟುಂಬ ಸಮೇತ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಮೈತ್ರಿ ಸರ್ಕಾರ ರಚನೆಯಾಗಿರುವುದು ಅತೃಪ್ತರು ಸೇರಿ. ಇವರೆಲ್ಲರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಒಬ್ಬರ ಖಾತೆಯಲ್ಲಿ ಮತ್ತೊಬ್ಬರು ಮೂಗುತೂರಿಸಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಈ ಮೈತ್ರಿ ಸರಕಾರವು ಇನ್ನು ಹೆಚ್ಚುದಿನ ಅಸ್ತಿತ್ವದಲ್ಲಿರುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಜಯಗಳಿಸಿದ ಬಿಜೆಪಿ ಅಧಿಕ ಸೀಟುಗಳನ್ನು ಪಡೆದಿದೆ ಈ ಕಾರಣದಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ಅವರೇ ಪ್ರದಾನಿಯಾಗಬೇಕು ಎನ್ನುವ ಪ್ರಾರ್ಥನೆಯೊಂದಿಗೆ ತುಲಾಭಾರ ನಡೆಸಿರುವುದಾಗಿ’ ತಿಳಿಸಿದರು.
ನಮ್ಮ ಬಿಜೆಪಿ ಪಕ್ಷವು ಕಳೆದ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಮತಪಡೆದು ಅಧಿಕ ಸೀಟುಗಳನ್ನು ಪಡೆದಿದೆ, ಈ ಬಾರಿಯೂ ಚುನಾವಣೆಯಲ್ಲಿ ಹೆಚ್ಚು ಸೀಟುಗಳನ್ನು ಗೆದ್ದು ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗ ಬೇಕೆಂದು ತುಲಾಭಾರ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.