ದಿನದ ಸುದ್ದಿ
ಆನ್ ಲೈನ್ ಪ್ರಬಂಧ ಸ್ವರ್ಧೆಗೆ ಆಹ್ವಾನ
ಸುದ್ದಿದಿನ,ಚಿಟಗುಪ್ಪ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಚಿಟಗುಪ್ಪ ತಾಲೂಕು ಘಟಕದ ವತಿಯಿಂದ ಈ ತಿಂಗಳು ಅಂದರೆ ಅಗಸ್ಟ 29,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಸುತ್ತೂರು ಶ್ರೀ ಮಠದ ಲಿಂ.ಪೂಜ್ಯ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಾಹಾಸ್ವಾಮಿಗಳವರ ಜನ್ಮದಿನದ ಅವರ ನೆನಪಿಗಾಗಿ ದಿ:29-08-2020 ರಂದು ವಚನ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ಆದಕಾರಣ ವಿಧ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ online ಪ್ರಬಂಧ ಬರೆಯುವ ವಿಶೇಷ ಸ್ವರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷರಾದ ಸಂಗಮೇಶ ಎನ್ ಜವಾದಿಯವರು ಪ್ರಕಟಣೆ ತಿಳಿಸಿದ್ದಾರೆ.
ಸ್ವರ್ಧೆ ವಿವರಗಳು ಹೀಗಿವೆ: (ಚಿಟಗುಪ್ಪ ತಾಲೂಕಿನವರಿಗೆ ಮಾತ್ರ)
1)ಪ್ರೌಢಶಾಲೆ ವಿದ್ಯಾರ್ಥಿಗಳಿಗೆ – ಪ್ರಬಂಧ ವಿಷಯ : ನನ್ನ ನೆಚ್ಚಿನ ಶರಣ/ಶರಣೆಯರು.
2)ಸಾರ್ವಜನಿಕರಿಗೆ – ಪ್ರಬಂಧ ವಿಷಯ : ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಮತ್ತು ಅನುಷ್ಠಾನ.
ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೂ ದಿನಾಂಕ 25-08-2020 ಒಳಗಾಗಿ ಸದರಿ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ತಮ್ಮ ಪ್ರಬಂಧಗಳು ಬರೆದು ಕೆಳಗೆ ಕೊಟ್ಟಿರುವ ವಾಟ್ಸಾಪ್ ನಂಬರಿಗೆ ಕಳುಹಿಸಲು ಕೋರಲಾಗಿದೆ.ಎರಡು ಹಂತಗಳಿಗೂ ಪ್ರಥಮ, ದ್ವಿತೀಯ ಮತ್ತು ತೃತೀಯ ಆಕರ್ಷಕ ವಿಶೇಷ ಬಹುಮಾನ, ಪ್ರಶಸ್ತಿ ಪ್ರತ ನೀಡಲಾಗುತ್ತದೆ ಹಾಗೂ ಉತ್ತಮ ಬರಹಗಳಿಗೂ ಬಹುಮಾನ,ಪ್ರಮಾಣ ಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಶರಣ ಸಂಗಮೇಶ ಎನ್ ಜವಾದಿ,ಅಧ್ಯಕ್ಷರು – ತಾಲೂಕ ಘಟಕ ಚಿಟಗುಪ್ಪ – 9663809340
ಸುದ್ದಿದಿನ.ಕಾಂ|ವಾಟ್ಸಾಪ್|9980346243