ದಿನದ ಸುದ್ದಿ

ದೇಶದಲ್ಲಿಎಂಎಸ್ ಎಂಇ ವಲಯ ಉತ್ತೇಜಿಸಲು ಸರ್ಕಾರದ ನೀತಿಯಲ್ಲಿ ಅಗತ್ಯ ಬದಲಾವಣೆ : ಪ್ರಧಾನಿ ಮೋದಿ

Published

on

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು-ಎಂಎಸ್‌ಎಂಇ ವಲಯವನ್ನು ಉತ್ತೇಜಿಸಲು ಸರ್ಕಾರ ತನ್ನ ನೀತಿಯಲ್ಲಿ ಅಗತ್ಯ ಬದಲಾವಣೆ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿಯಲ್ಲಿಂದು ಉದ್ಯಮಿ ಭಾರತ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 8 ವರ್ಷಗಳಲ್ಲಿ ಈ ವಲಯವನ್ನು ಬಲಪಡಿಸಲು ಬಜೆಟ್ ಅನುದಾನವನ್ನು ಶೇಕಡ ೬೫೦ರಷ್ಟು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಭಾರತದ ಆರ್ಥಿಕತೆಯ ಬಹುತೇಕ ಮೂರನೇ ಒಂದರಷ್ಟು ಪ್ರಮಾಣ ಎಂಎಸ್‌ಎಂಇ ವಲಯದ್ದಾಗಿದೆ ಮತ್ತು ಭಾರತದ ಪ್ರಗತಿಯ ಪಯಣದಲ್ಲಿ ಈ ವಲಯ ಅತ್ಯಂತ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು.

ಎಂಎಸ್‌ಎಂಇ ಎಂದರೆ ಸರ್ಕಾರದ ಅರ್ಥದಲ್ಲಿ ಸೂಕ್ಷ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಗರಿಷ್ಠ ಬೆಂಬಲ ನೀಡುವುದಾಗಿದೆ ಮತ್ತು 50 ಸಾವಿರ ಕೋಟಿ ರೂಪಾಯಿಗಳಷ್ಟು ಸ್ವಾವಲಂಭಿ ನಿಧಿಯನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರಕ್ಕೆ ಸಾಮಗ್ರಿಗಳನ್ನು ಪೂರೈಸಲು ಎಂಎಸ್‌ಎಂಇಗಳು ಜಿಇಎಂ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂದು ಅವರು ಕರೆ ನೀಡಿದರು.

200 ಕೋಟಿ ರೂಪಾಯಿವರೆಗಿನ ಆದೇಶಗಳಿಗೆ ಜಾಗತಿಕ ಟೆಂಡರ್ ಕರೆಯುವ ಅಗತ್ಯವಿಲ್ಲ. ಈ ಮೊತ್ತದ ಯೋಜನೆಗಳನ್ನು ಎಂಎಸ್‌ಎಂಇ ಗಳಿಗೆ ಮೀಸಲಿಡಲು ಸರ್ಕಾರ ತೀರ್ಮಾನಿಸಿದೆ ಎಂದು ಪ್ರಧಾನಿ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version