ಸಿನಿ ಸುದ್ದಿ

ಅಂದಿಗೂ ಹಿಟ್, ಎಂದೆಂದಿಗೂ ಹಿಟ್ ನಾಗರಹಾವು..!

Published

on

ಚಿತ್ರ ಮಂದಿರ ಗಳ ಮುಂದೆ ರಾರಾಜಿಸುತ್ತಿವೆ ವಿಷ್ಣುದಾದಾ ಕಟೌಟ್..! 

ನಾಲ್ಕು ದಶಕಗಳ ಹಿಂದೆ 35mm ನಲ್ಲಿ ತೆರೆಕಂಡಿದ್ದ ಕನ್ನಡದ ಅತ್ಯದ್ಭುತ ಲೆಜೆಂಡರೀ ಸಿನಿಮಾ ‘ನಾಗರಹಾವು’, ನಾಳೆ ಶುಕ್ರವಾರ ಜುಲೈ 20ರಂದು ಮತ್ತೆ ತೆರೆಕಾಣುತ್ತಿದೆ. ಈ ಬಾರಿ DI ಮತ್ತು 7.1 ಸರೌಂಡ್ ಸರೌಂಡ್ ನೊಂದಿಗೆ ತೆರೆಗೆ ಅಪ್ಪಳಿಸುತ್ತಿದೆ.

ಆಗಿನ ಕಾಲಕ್ಕೆ ವಿಷ್ಣುವರ್ಧನ್ ರಿಗೆ ದೊಡ್ಡ ಪ್ರಮಾಣದಲ್ಲಿ ಯಶಸ್ಸು-ಕೀರ್ತಿ ತಂದುಕೊಟ್ಟ ಚಿತ್ರ ‘ನಾಗರಹಾವು’ ರಾಮಾಚಾರಿಯ ಪಾತ್ರದ ವರ್ಣನೆ ಗೆ ಪದಗಳೇ ಸಾಲದು. ಅಷ್ಟು ಅದ್ಭುತವಾಗಿ ಆ ಪಾತ್ರ ವನ್ನ ತೆರೆಯ ಮೇಲೆ ಜೀವಂತಗೊಳಿಸಿದರು ವಿಷ್ಣು ದಾದಾ. ಮೇಷ್ಟ್ರ ಪಾತ್ರದಲ್ಲಿ ಅಶ್ವತ್, ನಾಯಕ ನಟಿ ಆರತಿ ಅಮೋಘ ಅಭಿನಯ, ಮಾರ್ಗರೇಟ್ ಳ ಅದ್ಭುತ ನಟನೆ, ಲೀಲಾವತಿಯವರ ನೈಜ ನಟನೆಯ.. ಇವೆಲ್ಲವೂ ಪುಟ್ಟಪ್ಪ ಕಣಗಾಲ್ ರ ನಿರ್ದೇಶನದಲ್ಲಿ  ಅತ್ಯದ್ಭುತವಾಗಿ ಮೂಡಿ ಬಂದಿದೆ. ಈಶ್ವರಿ ಕಂಬೈನ್ಸ್ ರ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರದ ಹಾಡುಗಳು ಆನಂದ್ ಆಡಿಯೋ ದಲ್ಲಿ ಬಿಡುಗಡೆ ಯಾಗಿದ್ದು… ಸೂಪರ್ ಸೂಪರ್ ಹಿಟ್! ಒಂದೊಂದು ಹಾಡು ಎವರ್ಗ್ರೀನ್!

• ಹಿಸ್ಟರಿ ರಿಪೀಟ್! ಆಗಹೊರಟಿದ್ದು… ನಾಳೆ ‘ನಾಗರಹಾವು’ ತೆರೆಕಾಣುತ್ತಿದೆ. ಪ್ರೇಕ್ಷಕರಲ್ಲಿ ಬಹಳಷ್ಟು ಖುಷಿ ಹಾಗೂ ಉತ್ಸಾಹ ಕಳೆ ಕಟ್ಟಿದ್ದು, ಭಾರೀ ಬೇಡಿಕೆ ವ್ಯಕ್ತವಾಗಿದೆ.

• ಚಿತ್ರದ ಟಿಕೆಟ್ ಗಳು ಒಂದು ವಾರದ ಮುಂಚೆಯೇ ದೊರೆಯುತ್ತಿದ್ದು.. ಬುಕ್ಕಿಂಗ್ ಜೋರಾಗಿದೆ ಸಾಗಿದೆ.

• ಬೆಂಗಳೂರಿನ ವೀರೇಶ್, ನರ್ತಕಿ ಥಿಯೇಟರ್ ನಲ್ಲಿ ಷೋಗಳು ಫುಲ್ ಆಗಿವೆ!

• ಚಿತ್ರ ಮಂದಿರಗಳ ಮುಂದೆ ರಾರಾಜಿಸುತ್ತಿವೆ ವಿಷ್ಣು ದಾದಾರ ಕಟೌಟ್!

• ಹೊಸಾ ರೂಪದಲ್ಲಿ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೈಲಿಗಲ್ಲು ಬರೆದ ಚಿತ್ರ ನಾಳೆ ರೀ-ರಿಲೀಸ್! ಅಭಿಮಾನಿ ಗಳಲ್ಲಿ ಮುಗಿಯಲು ಮುಟ್ಟಿದ ಹರ್ಷೋಧ್ಗಾರ.

• ಇಡೀ ಕನ್ನಡ  ಚಿತ್ರರಂಗವೇ ಈ ಚಿತ್ರದ ಬಿಡುಗಡೆಯ ಕಾದು ಕುಳಿತಿದ್ದು, ಚಿತ್ರದ ಬಗ್ಗೆ ತಮ್ಮ ಅಪೂರ್ವ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

• ಒಟ್ಟಾರೆ ನಾಗರಹಾವಿನ ಬಿಸಿಲಿನ ಸಪ್ಪಳ ನಾಳೆಯಿಂದ ಚಿತ್ರಮಂದಿರದಲ್ಲಿ ಶುರು.

Leave a Reply

Your email address will not be published. Required fields are marked *

Trending

Exit mobile version