ದಿನದ ಸುದ್ದಿ
ಬ್ಲಾಕ್ ಮೇಲ್ ಮಾಡಿದ ಹಳೇ ಬಾಯ್ ಫ್ರೆಂಡ್ ಸೆರೆ
ಸುದ್ದಿದಿನ ಡೆಸ್ಕ್: ಟೆಕ್ಕಿಯೊಬ್ಬರ ಖಾಸಗಿ ವಿಡಿಯೊವನ್ನು ಯೂಟ್ಯೂಬ್‍ನಲ್ಲಿ ಬಿಡುಗಡೆಮಾಡುವುದಾಗಿ ಹೆದರಿಸಿ ಆಕೆಯಿಂದ 50 ಸಾವಿರ ರೂ. ವಸೂಲಿ ಮಾಡಿದ್ದ ಹೇಳೇ ಬಾಯ್‍ಫ್ರೆಂಡ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಮುರುಗೇಶ್ ಬಂಧಿತ. ಜೀವನ್ ಬಿಮಾ ನಗರ ಮೂಲದವನಾದ ಈತ ಖಾಸಗಿ ಕಂಪನಿಯೊಂದಲ್ಲಿ ಉದ್ಯೋಗ ಮಾಡುತ್ತಿದ್ದ. ಆಗ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಪರಿಚಿತಳಾದಳು. ಸ್ನೇಹ ಪ್ರೇಮಕ್ಕೆ ತಿರುಗಿತು. ಇಬ್ಬರೂ ಖಾಸಗಿಯಾಗಿದ್ದ ಚಿತ್ರಗಳನ್ನು ಮುರುಘೇಶ್ ಕ್ಲಿಕ್ ಮಾಡಿದ್ದ.
ಇಬ್ಬರ ಪ್ರೇಮ ಬ್ರೇಕ್ ಅಪ್ ಆದ ಮೇಲೆ ಇದೇ ಚಿತ್ರಗಳು, ವಿಡಿಯೊಗಳನ್ನಿಟ್ಟುಕೊಂಡು ಐದು ಲಕ್ಷ ರೂ. ಕೊಡುವಂತೆ ಯುವತಿಯನ್ನು ಪೀಡಿಸುತ್ತಿದ್ದ. ಒಂದು ವೇಳೆ ಕೊಡದಿದ್ದರೆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿಡಿಯೊವನ್ನು ಯೂಟ್ಯೂಬ್‍ನಲ್ಲಿ ಹಾಕುವುದಾಗಿ ಬ್ಲಾಕ್ ಮೇಲ್ ಮಾಡಿದ್ದ ಎನ್ನಲಾಗಿದೆ. ಇದಕ್ಕೆ ಜೂ.17ರವರೆಗೆ ಡೆಡ್‍ಲೈನ್ ನೀಡಿದ್ದ.
ಇದರಿಂದ ಬೆದರಿದ್ದ ಯುವತಿಯು ಪೊಲೀಸರಿಗೆ ದೂರು ನೀಡಿದ್ದು, ಮುರುಘೇಶ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ