ರಾಜಕೀಯ

ಬಾದಾಮಿ ಅಧಿಕಾರಿಗಳ ಬೆರವರಿಳಿಸಿದ ಸಿದ್ದು

Published

on

ಸುದ್ದಿದಿನ,ಬಾದಾಮಿ : ಮಾಜಿ‌ ಸಿಎಂ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ಬಾದಾಮಿಯ ಪ್ರವಾಸದಲ್ಲಿದ್ದಾರೆ. ಕ್ಷೇತ್ರದ ಕುಂದು-ಕೊರತೆಗಳ ಬಗ್ಗೆ ಕಾಳಜಿವಹಿಸಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಸಭೆ ನಡೆಸಿದ ಅವರು ಅಧಿಕಾರಿಗಳನ್ನು ತರಾಟೆಗೆ ತಡಗೆದುಕೊಂಡಿದ್ದಾರೆ.

ಬಾದಾಮಿಯ ತಾಲೂಕು ಪಂಚಾಯಿತಿಯ ಆವರಣದಲ್ಲಿ ನಡೆಸಿದ ಸಭೆಯಲ್ಲಿ ಅಧಿಕಾರಿಗಳ ಚಳಿಬಿಡಿಸಿದ್ದು, ಮಾಹಿತಿಯನ್ನ ಸರಿಯಾಗಿ ನೀಡದಿದ್ದರೆ ಕಠಿಣಕ್ರಮವನ್ನು ಜಾರಿಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಅಧಿಕಾರಿಗಳ ಬಳಿ ಮಾಹಿತಿ ಕೊರೆತೆಯಿದ್ದು ಮುಂದಿನ ಒಂದು ತಿಂಗಳೊಳಗೆ ಎಲ್ಲವೂ ಸರಿ ಇರಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ‌ ಅಧಿಕಾರಿಗಳ ಬಳಿ ಮಾಹಿತಿಯ ಕೊರತೆ ಎದ್ದು‌ ಕಾಣುತ್ತಿದ್ದು, ಮುಂದಿನ ತಿಂಗಳೊಳಗೆ ಮಾಹಿತಿಯನ್ನು ಸರಿಯಾಗಿ‌‌ ನೀಡಬೇಕೆಂದು ಖಡಕ್ ಆಗಿ ಸೂಚನೆ ಕೊಟ್ಟಿದ್ದಾರೆ.

ಸುದ್ದಿದಿನ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version