ರಾಜಕೀಯ
ಸಿದ್ದು ಮತ್ತೆ ಸಿಎಂ ವಿಚಾರ: ಹಲವರ ಬೆಂಬಲ, ಮತ್ತೆ ಕೆಲವರ ತಾತ್ಸಾರ !
ಸುದ್ದಿದಿನ ಡೆಸ್ಕ್: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗುವ ಹಿಂಗಿತ ವ್ಯಕ್ತಪಡಿಸಿದ್ದು ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ರಾಜಕೀಯದಲ್ಲಿ ಸಿದ್ದು ನಡೆದಿದ್ದೇ ದಾರಿ ಎಂಬ ವಾತಾವರಣದಲ್ಲಿ ಸೋತಿದ್ದರು. ಆದರೆ ಇದಕ್ಕೆ ವಿರೋಧಿ ಶಕ್ತಿಗಳು ಹೊಂದಾಗಿದ್ದು ಕಾರಣ ಅಂತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.
ರಾಜಕೀಯದಲ್ಲಿ ಅವರ ವರ್ಚಸ್ಸು ಕಡಿಮೆ ಆಗಿಲ್ಲ ಎಂಬುದಕ್ಕೆ ಅವರ ಪ್ರತಿ ಹೇಳಿಕೆಗಳು ಸಂಚಲ ಸೃಷ್ಟಿಸುವುದೇ ಸಾಕ್ಷಿ. ಇನ್ನು ‘ಮತ್ತೆ ಸಿಎಂ ಆಗುತ್ತೇನೆ’ ಎಂದು ಹೇಳಿದ್ದ ಸಿದ್ದರಾಮಯ್ಯ ಅವರ ಹೇಳಿಕೆಗೆ ಹಲವರು ಬೆಂಬಲ ಸೂಚಿಸಿದ್ದು, ಮತ್ತೆ ಕೆಲವರು ಉದಾಸೀನದ ಪ್ರತಿಕ್ರಿಯೆ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಮತ್ತೆ ಸಿಎಂ ಆದರೆ ಸಂತೋಷವೇ: ರಮೇಶ್ ಜಾರಕಿಹೊಳಿ
ಅವರು ಮತ್ತೊಮ್ಮೆ ಸಿಎಂ ಆದರೆ ನನಗೂ ಸಂತೋಷವೇ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮೈಸೂರಿನ ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಸಚಿವ ರಮೇಶ್ ಜಾರಕಿಹೊಳಿ ಈ ಕುರಿತು ಮಾತನಾಡಿದರು.
ಸಿದ್ದರಾಮಯ್ಯ ನಮ್ಮ ನಾಯಕರು. ಅವರನ್ನು ವಾರಕ್ಕೊಮ್ಮೆ ಭೇಟಿಯಾಗುತ್ತಾ ಇರುತ್ತೇನೆ. ಆದರೆ ಕಳೆದ 15 ದಿನಗಳಿಂದ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ನನ್ನ ಕ್ಷೇತ್ರದ ಸಮಸ್ಯೆಗಳ ಸಂಬಂಧ ಮಾತುಕತೆ ನಡೆಸಿದ್ದೇನೆ ಎಂದರು.
ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಅಗಲಿ ಯಾರು ತಡೆಯಲಿದ್ದಾರೆ ಅವರನ್ನು: ವಿಶ್ವನಾಥ್
ಮಾಜಿ ಸಿಎಂ ಸಿದ್ದರಾಮಯ್ಯ ಬೇಕಾದರೆ ಸಿಎಂ ಆಗಲಿ, ಯಾರು ತಡೆಯಲಿದ್ದಾರೆ ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ.