ದಿನದ ಸುದ್ದಿ
ಮೋದಿಯವರೇ 44 ಯೋಧರು ಮಡಿದಾಗ ನಿಮ್ಮ ಇಂಟೆಲಿಜೆನ್ಸಿ ಸತ್ತು ಹೋಗಿತ್ತಾ ? : ಸಿದ್ದರಾಮಯ್ಯ ಕಿಡಿ
ಸುದ್ದಿದಿನ, ಬೆಂಗಳೂರು : ಪ್ರಧಾನಿ ಮೋದಿಯವರೇ 44 ಯೋಧರು ಭಯೋತ್ಪಾದಕರ ದಾಳಿಗೆ ತುತ್ತಾದರಲ್ಲ ಆಗ ನಿಮ್ಮ ಇಂಟೆಲಿಜೆನ್ಸಿ ಸತ್ತು ಹೋಗಿತ್ತಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ‘ಮಾಧ್ಯಮ ಮಾತು ಮಂಥನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಡವರ ಬ್ಯಾಂಕ್ ಖಾತೆಗೆ 15 ಲಕ್ಷ ರೂ ಹಾಕುತ್ತೇನೆ ಎಂದು 2014 ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಹೇಳಿದಿರಲ್ಲಾ ಎಲ್ಲಿ ಆ ಹಣ? ನೋಟ್ ಬ್ಯಾನ್ ಮಾಡಿ ಕಪ್ಪು ಹಣ ಹೊರ ಬರುವಂತೆ ಮಾಡ್ತೇವೆ ಎಂದಿರಲ್ಲ ಎಲ್ಲಿ ಆ ಕಪ್ಪು ಹಣ? ಎಷ್ಟು ಬಂದಿದೆ ಆ ಕಪ್ಪು ಹಣ? ಈ ಹಿನ್ನೆಲೆಯಲ್ಲಿ ಯಾರ ಮೇಲೆ ನೀವು ಕ್ರಮ ತೆಗೆದುಕೊಂಡಿದ್ದೀರಿ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಭಾರೀ ಹೊಗಳಿ ಕೊಳ್ಳುತ್ತಿದ್ದು, ಸ್ವಾತಂತ್ರ್ಯ ಬಂದ ಮೇಲೆ ಇಂತಹ ಹಲವು ಸರ್ಜಿಕಲ್ ಸ್ಟ್ರೈಕ್ ಗಳು ನಡೆದಿವೆ. ಆ ಸಂದರ್ಭದಲ್ಲಿ ಮೋದಿಯಿರಲಿಲ್ಲ. ಬಾಂಗ್ಲಾ ಪ್ರತ್ಯೇಕವಾದಾಗ ಮೋದಿಯೇನು ಪ್ರಧಾನಿಯಾಗಿರಲಿಲ್ಲ. ಪಾಕಿಸ್ತಾನವನ್ನು ಎರಡು ಭಾರಿ ಸೋಲಿಸಿದಾಗ ಮೋದಿ ಇರಲಿಲ್ಲ ಎನ್ನುವುದು ಗಮನದಲ್ಲಿರಲಿ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401