ರಾಜಕೀಯ

ಮೈಸೂರಿಗೆ ಪ್ರತಾಪ್ ಸಿಂಹ ನ ಕೊಡುಗೆ ಏನು ? : ಸಿದ್ದರಾಮಯ್ಯ ಕಿಡಿ

Published

on

ಸುದ್ದಿದಿನ,ಮೈಸೂರು : ನಾನು ಮಹದೇವಪ್ಪ ಬೆಂಗಳೂರು ಮೈಸೂರು ರಸ್ತೆ ಅಭಿವೃದ್ಧಿ ಪಡಿಸುವಾಗ ಪ್ರತಾಪ್ ಸಿಂಹ ಎಲ್ಲಿದ್ದ. ಅವನ ಕೊಡುಗೆ ಮೈಸೂರಿಗೆ ಏನು.? ನಾವು ಮಾಡಿದ ಕೆಲಸವನ್ನು ತಾನು ಮಾಡಿದ್ದು ಎಂದು ಹೇಳಿ ತಿರುಗುತ್ತಿದ್ದಾನೆ ಎಂದು ಸಿದ್ದಾರಾಮಯ್ಯ ಕಿಡಿಕಾರಿದ್ದಾರೆ.

ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಪ್ರತಾಪ್ ಸಿಂಹ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ಪ್ರತಾಪ್ ಸಿಂಹ ಮಾತ್ರವಲ್ಲ, ಬಿಜೆಪಿ ಯಾವ ಸಂಸದರು ಯಾವ ಕೆಲಸವನ್ನು ಮಾಡಿಲ್ಲ. ನಮ್ಮ ದೃವನಾರಾಯಣ್ ಜೊತೆಗೆ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯವರು ಚರ್ಚೆಗೆ ಬರುತ್ತಾರಾ..? ಶೋಭ ಕರಂದ್ಲಾಜೆ ಬರುತ್ತಾಳ, ನಳಿನ್ ಕುಮಾರ್ ಕಟೀಲ್ ಅನಂತ್ ಕುಮಾರ್ ಹೆಗಡಿ ಚರ್ಚೆಗೆ ಬರುತ್ತಾರಾ.? ಏನು‌ ಮಾಡದೆ ಸುಮ್ಮನೆ‌ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಚಾಮರಾಜನಗರ ಲೋಕಸಭಾ ಚುನಾವಣೆ ಹಿನ್ನೆಲೆ‌ ವಿ.ಶ್ರೀನಿವಾಸ್ ಪ್ರಸಾದ್ ಚಾಮರಾಜನಗರದಿಂದ ಸ್ಪರ್ಧೆ ಮಾಡೋ ವಿಚಾರ ಯಾರು ಎಲ್ಲಿ ಬೇಕಾದರು ನಿಂತುಕೊಳ್ಳಲಿ. ಯಾರು ಬೇಕಾದರು ಅಭ್ಯರ್ಥಿಯಾಗಲು ಸ್ವತಂತ್ರರು. ಚುನಾವಣೆಗೆ ನಿಲ್ಲೊದು ಅವರವರ ವೈಯಕ್ತಿಕ ವಿಚಾರ. ಆ ಬಗ್ಗೆ ನಾನು ಏನನ್ನು ಹೇಳೋದಿಲ್ಲ‌ ಎಂದು ವಿ.ಶ್ರೀನಿವಾಸ್ ಪ್ರಸಾದ್‌ಗೆ ಪರೋಕ್ಷವಾಗಿ ಸಿದ್ದರಾಮಯ್ಯ ಟಾಂಗ್ ನೀಡಿದರು.

ಸುಮಲತಾ ಸ್ಪರ್ಧೆ ಬಗ್ಗೆ ನಾನು ಮಾತನಾಡಲ್ಲ.ನಮ್ಮ ಪಾರ್ಟಿಯಿಂದ ಅವರು ನಿಲ್ಲೊಲ್ಲ. ಹಾಗಾಗಿ ಅವರ ಬಗ್ಗೆ ನಾನು ಮಾತನಾಡೊಲ್ಲ. ಸುಮಲತಾ ಈಗಲೂ ನಮ್ಮ ಪಾರ್ಟಿಯಲ್ಲಿ ಇದ್ದಾರೆ.ಆದ್ರೆ ನಮ್ಮ ಪಾರ್ಟಿಯಿಂದ ಅವರು ನಿಲ್ಲುತ್ತಿಲ್ಲ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌‌ಗೆ ಬಿಟ್ಟು ಕೊಟ್ಟಿದ್ದೇವೆ. ಉಳಿದದ್ದು ಅವರಿಗೆ ಬಿಟ್ಟದ್ದು.ನಿನ್ನೆ ನಿಖಿಲ್ ಅಭ್ಯರ್ಥಿ ಅಂತ ಘೋಷಣೆ ವಿಚಾರ. ಕ್ಷೇತ್ರವನ್ನ ಅವರಿಗೆ ಬಿಟ್ಟಾಗಿದೆ. ಜೆಡಿಎಸ್‌ ಯಾರನ್ನ ಬೇಕಾದ್ರು ಕ್ಯಾಂಡಿಡೆಟ್ ಅಂತ ಹೇಳಲಿ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version