ದಿನದ ಸುದ್ದಿ
ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಒಂದು ಊಟಕ್ಕೆ ಕೊಟ್ಟಿದ್ದು ಏಳು ಲಕ್ಷ ರೂ.
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಒಂದು ಊಟಕ್ಕೆ ಏಳು ಲಕ್ಷ ರೂ. ಕೊಟ್ಟಿದ್ದಾರೆಯೆ? ಈ ಕುರಿತ ಟ್ವಿಟರ್ ಪೋಸ್ಟ್ ವೊಂದು ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಸುದ್ದಿದಿನ ಡೆಸ್ಕ್: ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಒಂದು ಊಟಕ್ಕೆ ಏಳು ಲಕ್ಷ ರೂ. ಕೊಟ್ಟಿದ್ದಾರೆಯೆ?
ಟ್ವಿಟರ್ ನಲ್ಲಿ ಈ ಕುರಿತು ಅವರ ಪೋಸ್ಟ್ ಮಾಡಿದ ಹೋಟೆಲ್ ಬಿಲ್ ಹೌದೆಂದು ಹೇಳುತ್ತಿದೆ.
ಒಂದು ಊಟಕ್ಕೆ ಏಳು ಲಕ್ಷ ರೂಪಾಯಿನಾ? ಎಂಬ ಸಂದೇಹವೇ? ನಿಜ ಎಂದು ಹೇಳುತ್ತಿದೆ ಈ ಬಿಲ್.
ಚೋಪ್ರಾ ಅವರು ಈ ಪೋಸ್ಟ್ ಹಾಕಿದ ಕೆಲವೇ ಹೊತ್ತಿನಲ್ಲಿ ಟ್ವಿಟರ್ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.
ಒಂದು ಊಟಕ್ಕೆ ಈ ಪರಿ ಹಣ ಖರ್ಚು ಮಾಡುವ ಚೋಪ್ರಾ ಅವರು ಅನಾಥ ಮಕ್ಕಳಿಗಾಗಿ ಈ ಹಣ ನೀಡಿದ್ದರೆ ಎಷ್ಟು ಒಳ್ಳೆಯದಾಗುತ್ತಿತ್ತು. ಚೋಪ್ರಾಗೆ ಹಣದ ಬೆಲೆ ಗೊತ್ತಿಲ್ಲ ಎಂಬೆಲ್ಲಾ ಕಮೆಂಟ್ ಗಳು ವ್ಯಕ್ತವಾಯಿತು.
ನಿಜಕ್ಕೂ ಏಳು ಲಕ್ಷ ಕೊಟ್ರಾ?
ಚೋಪ್ರಾ ಅವರ ಟ್ವೀಟ್ ಅನ್ನುಸೂಕ್ಷ್ಮವಾಗಿ ಗಮನಿಸಿದರೆ ಅದರ ಪೂರ್ಣ ಸಂಗತಿ ಅರ್ಥವಾಗುತ್ತೆ. ಚೋಪ್ರಾ ಅವರು ನಿಜಕ್ಕೂ ಊಟಕ್ಕೆ ಖರ್ಚು ಮಾಡಿದ್ದು 3332 ರೂಪಾಯಿಗಳು. ಸದ್ಯ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಪ್ರವಾಸದಲ್ಲಿರುವ ಚೋಪ್ರಾ 7 ಲಕ್ಷ ರೂ ಇಂಡೋನೇಷ್ಯನ್ ರೂಪಾಯಿಗಳನ್ನು ನೀಡಿದ್ದರು. ಇಂಡೋನೇಷ್ಯನ್ ರೂಪಾಯಿಯು ಡಾಲರ್ ಮುಂದೆ ಭಾರತೀಯ ರೂಪಾಯಿಗಿಂತ ಕಡಿಮೆ ಮೌಲ್ಯ ಹೊಂದಿದೆ.