ಲೈಫ್ ಸ್ಟೈಲ್
Exclusive Interview : ಫ್ಯಾಷನ್ ‘ಚಿಟ್ಟೆ’ ಹರ್ಷಿಕಾ ಪೂಣಚ್ಚ
ವೈರಲ್ ಆಯ್ತು ಸ್ಯಾಂಡಲ್ವುಡ್ ಪ್ರಿಂಸೆಸ್ ಹರ್ಷಿಕಾ ಪೂಣಚ್ಚ ರ ಬೆನ್ನ ಮೇಲೆ ಅರಳಿದ ‘ಚಿಟ್ಟೆ’ ರಂಗೇರಿದೆ ಚಿಟ್ಟೆ ಭರಾಟೆ..!
ಎಮ್.ಎಲ್.ಪ್ರಸಣ್ಣ ನಿರ್ದೇಶನದ,ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಯಶಸ್ ಸೂರ್ಯ ನಟಿಸಿರುವ ,”ಚಿಟ್ಟೆ ” ಚಿತ್ರ ಕರ್ನಾಟಕದೆಲ್ಲೆಡೆ ಜೂನ್ 29ರಂದು ಬಿಡುಗಡೆಗೆ ಸಿದ್ಧ ವಾಗಿದೆ. ಇದರ ಬೆನ್ನಲ್ಲೇ ಈ ಚಿತ್ರದ ನಾಯಕಿ, ಕೊಡಗಿನ ಚೆಲುವೆ, “ಸ್ಯಾಂಡಲ್ವುಡ್ ಪ್ರಿಂಸೆಸ್”,ಎಂದೇ ಹೆಸರಾಗಿರುವ ನಟಿ ಹರ್ಷಿಕಾ ಪೂಣಚ್ಚ ರ ಬೆನ್ನ ಮೇಲೆ ಅರಳಿರುವ ರಂಗುರಂಗೀನ್ ಚಿಟ್ಟೆ ಯ ಫೋಟೋ ಸೋಷಿಯಲ್ ಮೀಡಿಯಾ ದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಈ ಸುಂದರಿಯ ಬೆನ್ನ ಮೇಲಿನ ಚಿಟ್ಟೆ ಯ ಸ್ಟೋರಿ ಇಲ್ಲಿದೆ. ಚಿತ್ರರದಲ್ಲಿ ನಾಯಕ ತನ್ನ ಕುುಂಚದ ಕಲೆಯನ್ನು ನಾಯಕಿಯ ಬೆನ್ನ ಮೇಲೆ ಮೂಡಿಸುವ ದೃಶ್ಯದಲ್ಲಿ ಈ ಫೋಟೋ ಮೂಡಿ ಬಂದಿದೆಯಂತೆ.
ಸದ್ಯ ತಮ್ಮ “ಚಿಟ್ಟೆ ” ಚಿತ್ರದ ಪ್ರಚಾರದಲ್ಲಿ ಬಿಜಿಯಾಗಿರುವ ಈ ಚೆಲುವೆ, ಸುದ್ದಿದಿನಕ್ಕೆ ನೀಡಿರುವ ವಿಶೇಷ ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ.
• ಸ್ಯಾಂಡಲ್ ವುಡ್ ಕ್ಯೂಟಿ ಪೈ “ಚಿಟ್ಟೆ “ಯ ಫ್ಯಾಷನ್ ಬಗ್ಗೆ ಏನಂತಾರೆ…?
ಹರ್ಷಿಕಾ ರ ಮಾತಲ್ಲಿ ಹೇವುದಾದರೆ..ಈ ಚಿತ್ರದಲ್ಲಿನ ಇವರ ಪಾತ್ರ ಬಹಳ ಫ್ಯಾಷನಬಲ್ ಆಗಿ ಮೂಡಿಬಂದಿದೆಯಂತೆ. ಇಡೀ ಚಿತ್ರದಲ್ಲಿ ಈ ಬೆಡಗಿ ವಿಭಿನ್ನ ಟ್ರೆಂಡೀ ಹಾಗೂ ಸ್ಟೈಲಿಶ್ ಉಡುಪುಗಳಲ್ಲಿ ಮಿಂಚಿದ್ದಾರೆ. ಸೆಲಿಬ್ರಿಟಿ ಫ್ಯಾಷನ್ ಡಿಸೈನರ್ ಚಂದನಾ ಆರಾಧ್ಯ ಈ ಚಿತ್ರಕ್ಕೆ ಸ್ಟೈಲಿಂಗ್ ಮಾಡಿದ್ದು, “ಸೊನಾ.. ಸೊನಾ” ಹಾಡಲ್ಲಿ ನಾಯಕಿ ಧರಿಸಿರುವ ಎಂಟು ಉದ್ದನೆಯ ಗೌನ್ಗಳು ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ.
• ಹರ್ಷಿಕಾ ರ ದೃಷ್ಟಿಯಲ್ಲಿ ಫ್ಯಾಷನ್ ಅಂದರೆ ಏನು?
ಏನೇ ಉಡುಪು ಧರಿಸಿದರೂ ಬಹಳ ಕಾಂಫಿಡೆಂಟ್ ಮತ್ತು ಕಂಫರ್ಟಬಲ್ ಆಗಿರಬೇಕು ಎನ್ನುತ್ತಾರೆ, ” ಚಿಟ್ಟೆ “ಬೆಡಗಿ ಹರ್ಷಿಕಾ . ನಾವು ತೊಡುವ ಉಡುಪು ಆರಾಮದಾಯಕ ವಾಗಿರುವುದಷ್ಟೇ ಅಲ್ಲದೆ ನಮ್ಮ ತನವನ್ನ, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವಂತಿರಬೇಕು ಅನ್ನುತ್ತಾರೆ.
ಸದಾ ತಮ್ಮಹಾಟ್ ಮತ್ತು ಗ್ಲಾಮರಸ್ ಲುಕ್ ನಿಂದ ಟಾಕ್ ಆಫ್ ಟೌನ್ ಆಗಿರುವ ಈ “ಫ್ಯಾಷನ್ ದೀವಾ”, ತಮ್ಮ ಚಿತ್ರದ ಪ್ರೆಸ್ ಮೀಟ್ ವೇಳೆ ಧರಿಸಿದ್ದ ಬಿಳಿ ಬಣ್ಣದ ಹರಳು-ಮುತ್ತುಗಳ ಬಾಡಿಫಿಟ್ ಡ್ರೆಸ್ ಇವರನ್ನು ಜನ ” ಶ್ವೇತ ಚಿಟ್ಟೆ ” ಎಂದು ಕರೆಯುವಷ್ಟು ಮುದ್ದಾಗಿ ಪ್ರಜ್ವಲಿಸುತ್ತಿದ್ದರು ಹರ್ಷಿಕಾ. ಅಮೇರಿಕಾ ದಿಂದ ಶಾಪ್ ಮಾಡಿದ 1500USD ಮೌಲ್ಯದ ಈ ಉಡುಪು ಎಲ್ಲರ ಗಮನ ಸೆಳೆದಿುತ್ತು.
ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ಉಡುಪುಗಳೆರಡನ್ನೂ ಬಹಳ ಸುಂದರವಾಗಿ ಕ್ಯಾರೀ ಮಾಡುವ ಈ ಚೆಲುವೆ, ಸಾಮಾನ್ಯವಾಗಿ ದಿನನಿತ್ಯ ದ ಬಳಕೆಗೆ ಟೊರ್ನ್ ಜೀನ್ಸ್- ಲೂಸ್ ಶರ್ಟ್-ಸ್ನೀಕರ್ಸ ಲುಕ್ ಹೆಚ್ಚು ಆರಾಮದಾಯಕ ಎನ್ನುತ್ತಾರೆ .
• ಈ ಸ್ಯಾಂಡಲ್ವುಡ್ ಚಿಟ್ಟೆ ಯ ಫೇವರಿಟ್ ಫ್ಯಾಷನ್ ಕಲರ್?
ರೆಡ್ ಮತ್ತು ಕ್ಯಾಂಡಿ ಪಿಂಕ್ ಉಡುಪುಗಳು ಇವರ ಬಲು ಇಷ್ಟ ದ ಫ್ಯಾಷನ್ ಕಲರ್ಗಳಾಗಿವೆ.
• ಹರ್ಷಿಕಾ ರ ಫೇವರಿಟ್ ಫ್ಯಾಷನ್ ಆಕ್ಸ್ ಸರೀ..?
ಆದಷ್ಟು ಕಡಿಮೆ ಒಡವೆಗಳನ್ನು ಧರಿಸುವುದು ಈ ಸುಂದರಿಯ ಸ್ಟೈಲ್. ಡಿಫರೆಂಟ್ ಅನಿಸುವ ಡಿಸೈನರ್ ಕಿವಿ ಓಲೆ ಗಳೆಂದರೆ ಒಲವು. ಆದಷ್ಟು “ನೋ ನೆಕ್ಲೇಸ್” ಪಾಲಿಸಿ ಫಾಲೋ ಮಾಡುವ ಈ ಹುಡುಗಿಗೆ ಖಡಾ ಬಳೆಗಳನ್ನ ಧರಿಸುವುದೆಂದರೆ ಇಷ್ಟ ವಂತೆ.
• ಹರ್ಷಿಕಾ ರ ಮೇಕಪ್ ಟಿಪ್…?
ಅತಿಯಾದ ಮೇಕಪ್ ಗಿಂತ, ಕೇವಲ ಕಣ್ಣು ಮತ್ತು ತುಟಿಯನ್ನು ಹೈಲೈಟ್ ಮಾಡುವುದು ಹೆಚ್ಚು ಆಕರ್ಷಕ ವಾಗಿ ಕಾಣುವಂತೆ ಮಾಡುತ್ತವೆ ,ಎನ್ನುತ್ತಾರೆ ಚಿಟ್ಟೆ ಬೆಡಗಿ ಹರ್ಷಿಕಾ.
• ಹರ್ಷಿಕಾ ರ ಸ್ಟೈಲ್ ಕೋಷಂಟ್ ಏನು?
ಕೂಲ್..ಕಂಫರ್ಟಬಲ್..ಕಾಂಫಿಡೆಂಟ್ ಆಗಿ ಮಿಂಚುವುದೇ ನನ್ನ ಸ್ಟೈಲ್ ಕೋಷಂಟ್ ಎನ್ನುತ್ತಾರೆ ಸ್ಯಾಂಡಲ್ವುಡ್ ನ ಫ್ಯಾಷನ್ ದೀವಾ ಎಂದೇ ಹೆಸರಾಗಿರುವ ಹರ್ಷಿಕಾ ಪೂಣಚ್ಚ.
ಸದ್ಯ ಇವರ ಮಹತ್ವಾಕಾಂಕ್ಷೆ ಯ ಚಿತ್ರ ” ಚಿಟ್ಟೆ” ಯ ಪ್ರಮೋಷನ್ ನಲ್ಲಿ ಬಿಜಿ ಇರುವ ಈ ಫ್ಯಾಷನ್ ಚಿಟ್ಟೆ ಯನ್ನು ಹಿಡಿಯ ಬೇಕೆಂದರೆ ಜೂನ್ 29ರಂದು ಚಿತ್ರ ಮಂದಿರಕ್ಕೆ ಹೋಗುವುದು ಮರೆಯದಿರಿ.
ಚಿಟ್ಟೆ ಹಾಡು ನೋಡಲು ಮರೆಯದಿರಿ