ಸಿನಿ ಸುದ್ದಿ
EXCLUSIVE INTERVIEW | ಸ್ಯಾಂಡಲ್ ವುಡ್ ಬ್ಯೂಟಿ ; ‘ಸ್ವರ್ಣಖಡ್ಗಂ’ನ ಮಹಧಾತ್ರಿ ಸಂಜನಾ ಗಲ್ರಾಣಿ
ಬಾಹುಬಲಿ ಚಿತ್ರದ ನಿರ್ಮಾಪಕರಿಂದ ಮತ್ತೊಂದು ಅದ್ದೂರೀ ಕೊಡುಗೆ; ತೆರೆಯ ಮೇಲೆ ಮಹರಾಣಿ ಮಹಧಾತ್ರಿಯಾಗಿ ಮಿಂಚಲಿದ್ದಾರೆ ಸ್ಯಾಂಡಲ್ ವುಡ್ ಬ್ಯೂಟಿ ಸಂಜನಾ ಗಲ್ರಾಣಿ
ಬಾಹುಬಲಿ ಚಿತ್ರದ ನಿರ್ಮಾಪಕರು, ಹಾಗೂ ಆರ್ಕಾ ಮೀಡಿಯಾ ವರ್ಕ್ಸ್ ಅವರ ಚಿಕ್ಕ ಪರದೆಯ ಮೇಲೆ ಬಹು ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ “ಸ್ವರ್ಣ ಖಡ್ಗಂ”. ಭಾರತೀಯ ಟಿ.ವಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಹದಿನಾಲ್ಕು ಭಾಷೆಗಳಲ್ಲಿ ಮೂಡಿ ಬರಲಿದ್ದು, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ತೆಲುಗಿನ ಖ್ಯಾತ ಸೀರಿಯಲ್ ನಿರ್ದೇಶಕರಾದ ಯತ ಸತ್ಯನಾರಾಯಣ ರವರು ಇದನ್ನು ನಿರ್ದೇಶಿಸಿದ್ದಾರೆ. ಜುಲೈ ಆರರಿಂದ ಪ್ರಾರಂಭವಾಗುತ್ತಿರುವ ಈ ದೊಡ್ಡ ಪ್ರಾಜೆಕ್ಟ್, ಪೌರಾಣಿಕ ಕಥಾ ಹದರ ಒಳಗೊಂಡಿದ್ದು, ಬಾಹುಬಲಿ ಚಿತ್ರದ ತಂತ್ರಜ್ಞರೇ ಇಲ್ಲೂ ಕೆಲಸ ಮಾಡಿದ್ದು ಮತ್ತಷ್ಟು ಕುತೂಹಲ ಮೂಡಿಸಿದೆ.
ಇದು ಸಂಜನಾ ‘ಡ್ರೀಮ್ ರೋಲ್ ‘
ಬಾಹುಬಲಿ ಚಿತ್ರ ನೋಡಿದ ಪ್ರತಿಯೊಬ್ಬ ನಟಿಯೂ, ನಾನು ಆ ಚಿತ್ರದ ಒಂದು ಭಾಗವಾಗಿರ ಬೇಕಿತ್ತು ಎಂದು ಮನಸ್ಸಲೇ ನೆನೆದಿದ್ದುಂಟು. ಆ ಸೌಭಾಗ್ಯ ಈಗ ಸ್ಯಾಂಡಲ್ ವುಡ್ ಬ್ಯೂಟಿ ಸಂಜನಾರ ಪಾಲಾಗಿದೆ.
‘ಸ್ವರ್ಣ ಖಡ್ಗಂ’ “ನನ್ನಒಂಬತ್ತು ವರ್ಷಗಳ ಸಿನಿ ವೃತ್ತಿಯಲ್ಲಿ ಯೇ ಇದು ಮಹತ್ವಾಕಾಂಕ್ಷೆ ಯ ಪಾತ್ರ. ಯಾವುದೇ ನಟಿಗಾದರೂ ಒಮ್ಮೆ ಯಾದರೂ ಇಂತಹ ಮಹಿಳಾ ಪ್ರಧಾನ ಪಾತ್ರ ದಲ್ಲಿ ಮಿಂಚುವ ಆಸೆ ಇದ್ದೇ ಇರುತ್ತದೆ. ಆ ಸೌಭಾಗ್ಯ ನನ್ನದಾಗಿದೆ ಎನ್ನುತ್ತಾರೆ ಸ್ಯಾಂಡಲ್ವುಡ್ ಬ್ಯೂಟಿ ಸಂಜನಾ.
ಸದ್ಯ ಇದೇ ಸೀರಿಯಲ್ ನ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸಂಜನಾ, ‘ಸುದ್ದಿದಿನ‘ ಕ್ಕೆ ನೀಡಿರುವ Exclusive Interview ನ ಸಂಪೂರ್ಣ ಡೀಟೇಲ್ ಇಲ್ಲಿದೆ.
ಯೋಧ ರಾಜಕುಮಾರಿಯ ಕಸರತ್ತು ಹೇಗಿದೆ ಗೊತ್ತಾ..!
ದಂಡುಪಾಳ್ಯದ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ಸಂಜನಾ, ಈಗಿನ ತಮ್ಮ ‘ಡ್ರೀಮ್ ರೋಲ್’ಗಾಗಿ ಬಹಳಷ್ಟು ಕಸರತ್ತು ಮಾಡುತ್ತಿದ್ದಾರೆ. ಮಹಾರಾಣಿ ಮಹಧಾತ್ರಿ ಯಾಗಿ ತೆರೆಯ ಮೇಲೆ ಮಿಂಚಲು ಹೊರಟಿರುವ ಸಂಜನಾ, ಈ ಪಾತ್ರಕ್ಕಾಗಿಯೇ ಕತ್ತಿ ವರಸೆ, ಕುದುರೆ ಸವಾರಿ ಯ ವಿಶೇಷ ತರಬೇತಿ ಯನ್ನು ಪಡೆದಿದ್ದಾರೆ.
ಸ್ಯಾಂಡಲ್ ವುಡ್ ಬ್ಯೂಟಿ ಸಂಜನಾ ಈಗ “ಸ್ವರ್ಣಖಡ್ಗಂ” ನ ಯೋಧ ರಾಜಕುಮಾರಿ !
ಈ ಮಹಿಳಾ ಪ್ರಧಾನ ಪಾತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಸಂಜನಾ, ದಿನನಿತ್ಯ ಬೆಳಿಗ್ಗೆ 3.30 ಕ್ಕೆ ಎದ್ದು ಸುಮಾರು ಒಂದೂವರೆ ಫಂಟೆಗಳ ಹೈ ಇಂಟೆಂಸಿಟೀ ವರ್ಕ್ ಔಟ್ ಮಾಡಿ, ನಂತರ ಸುಮಾರು ಎರಡೂವರೆ ಘಂಟೆಗಳ ಕಾಲ ಪಾತ್ರಕ್ಕಾಗಿ ರೆಡಿಯಾಗುತ್ತಾ ರಂತೆ.
ಸುಮಾರು 12-14 ತಾಸುಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸಂಜನಾ, ತಮ್ಮ ಪಾತ್ರಕ್ಕಾಗಿ 5-6 ಕೆ.ಜಿ ತೂಕದ ಕಾಸ್ಟ್ಯೂಮ್ ಧರಿಸುತ್ತಿದ್ದಾರೆ. ಇನ್ನು ಬಾಹುಬಲಿ ಚಿತ್ರದ ವಸ್ತ್ರ ವಿನ್ಯಾಸಕರೇ ಇಲ್ಲೂ ಕೆಲಸ ಮಾಡುತ್ತಿದ್ದು. ಮಹಾರಾಣಿ ಮಹಧಾತ್ರಿಯ ಲುಕ್ ಬಾಹುಬಲಿಯ ತುಣುಕು ಗಳನ್ನ ನೆನಪಿಸುತ್ತದೆ. ಸೀರಿಯಲ್ ನ ಪ್ರಮೋ ದಲ್ಲಿ ಶ್ವೇತ ಹಂಸದಂತೆ ಒಮ್ಮೆ ಕಣ್ಮನ ಸೆಳೆದರೆ, ಮತ್ತೊಮ್ಮೆ ಯೋಧರಾಣಿಯ ಖಡಕ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ ಸುಂದರಿ ಸಂಜನಾ.
“ಮಹಾರಾಣಿ ಮಹಧಾತ್ರಿ”ಯಾಗಿ ಮಿಂಚಲು ಹೊರಟಿರುವ ಸ್ಯಾಂಡಲ್ ವುಡ್ ಬ್ಯೂಟಿ ಸಂಜನಾರ ” ಫಿಟ್ನೆಸ್ ಸೀಕ್ರೇಟ್” ನಮ್ಮ ಮುಂದಿನ ಸಂಚಿಕೆಯಲ್ಲಿ ತಪ್ಪದೇ ಓದಿ.