ದಿನದ ಸುದ್ದಿ

ಎಕ್ಸ್‌ಕ್ಯೂಸ್ ಮಿ ಹಿರೋ ಅಜಯ್ ರಾವ್ ದಂಪತಿಗೆ ಪುತ್ರಿ ಆಗಮನದ ಸಂಭ್ರಮ

Published

on

ಸುದ್ದಿದಿನ ಬೆಂಗಳೂರು: ಪ್ರೇಮ್ ನಿರ್ದೇಶನದ ಎಕ್ಸ್‌ಕ್ಯೂಸ್ ಮಿ ಚಿತ್ರದ ಮೂಲಕ ಸ್ಯಾಂಡಲ್’ವುಡ್ ಪ್ರವೇಶಿಸಿದ ನಟ, ನಿರ್ಮಾಪಕ ಅಜಯ್ ರಾವ್ ಅವರಿಗೆ ಈಗ ಡಬಲ್ ಖುಷಿಯಲ್ಲಿದ್ದಾರೆ. ಈಚೆಗಷ್ಟೇ ತಾಯಿ ತಕ್ಕ ಮಗ ಚಿತ್ರ ಬಿಡುಗಡೆ ಮಾಡಿ ಸಖತ್ ಸುದ್ದಿಯಲ್ಲಿದ್ದ ಅಜಯ್ ರಾವ್ ಅಪ್ಪನಾಗಿ ಬಡ್ತಿ ಪಡೆಯುವ ಮೂಲಕ ಡಬಲ್ ಖುಷಿಯಲ್ಲಿದ್ದಾರೆ.

ಬಳ್ಳಾರಿ ಮೂಲದವರಾದ ಅಜಯ್, ಬಾಲ್ಯದ ಗೆಳತಿ ಸ್ವಪ್ನಾ ಅವರನ್ನು ಕೊಪ್ಪಳದಲ್ಲಿ 2014ರಂದು ವಿವಾಹವಾಗಿದ್ದರು. ಚಿತ್ರ ಕಲಾವಿದರಾದ ಸ್ವಪ್ನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅಜಯ್ ರಾವ್ ದಂಪತಿ ಈಗ ಲಿಟಲ್ ಏಂಜಲ್’ನ ಪ್ರೌಡ್ ಪೇರೆಂಟ್ ಆಗಿದ್ದಾರೆ. ತಮ್ಮ ಪತ್ನಿ, ಮಗುವಿನೊಂದಿಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ತಾಯಿಗೆ ತಕ್ಕ ಮಗ ಸಿನಿಮಾದ ಖುಷಿಯಲ್ಲಿದ್ದ ಅಜಯ್ ರಾವ್, ಇದೀಗ ಹೆಣ್ಣು ಮಗುವಿನ ತಂದೆಯಾಗಿರುವುದು ಸಂತೋಷವನ್ನು ಇಮ್ಮಡಿ ಗೊಳಿಸಿದೆ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಶುಭ ಹಾರೈಕೆಯ ಮಹಾಪೂರವೇ ಹರಿದುಬಂದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version