ಲೈಫ್ ಸ್ಟೈಲ್
EyeballTattoo, ScrelalTattoo ಎಲ್ಲಾ ಓಕೆ, ಕಣ್ಣು ಗುಡ್ಡೆಗೂ ಟಾಟೂ ಬೇಕೇ..!?
- ಚಿತ್ರಶ್ರೀ ಹರ್ಷ
ದಿನೇ ದಿನೇ ಯುವಪೀಳಿಗೆ ಯಲ್ಲಿ ಟಾಟು ಕ್ರೆಜ್ ಹೆಚ್ಚುತಿರುವುದು ಹೊಸದೆನಲ್ಲ. ಈಗಂತೂ ಯುವಕರ ಮೈಮೇಲೆ ಒಂದೆರಡಾದರೂ ಟಾಟು ಇರುವುದು ಮಾಮೂಲಾಗಿ ಬಿಟ್ಟಿದೆ. 24ರ ಹರೆಯದ ಆಸ್ಟ್ರೇಲಿಯಾ ದ ಅಂಬುರ್ ಲುಕ್ #AmburLuke , ಎಂಬ ಈಕೆ , ಸದ್ಯ ಸೋಶಿಯಲ್ ಮೀದಿಯದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಗುಥಿದ್ದಾರೆ. ವಿಶಿಷ್ಟತೆ ಇರುವುದು ಈಕೆಯ ಟಾಟೂ ಕ್ರೆಜ್ ನಲ್ಲೇ. ತನ್ನ 14 ನೇ ವಯಸ್ಸಿಗೇ,ಟಾಟೂ ಗೀಳು ಮೈ ಗಂಟಿಸಿಕೊಂಡಿದ ಈಕೆ ಮಾಡಿದ್ದು ಮಾತ್ರ ಯಾರೂ ಊಹಿಸಲಾಗದ ಕೆಲಸ.
https://www.instagram.com/p/B7s8cV-IVOx/?utm_source=ig_web_copy_link
ಕಳೆದ ಒಂದು ದಶಕದಲ್ಲಿ ತನ್ನ ಇಡೀ ದೇಹವನ್ನ ಟಾಟೂವಿನಿಂದ ಮುಚ್ಚಿರುವ ಈಕೆ , ನವೊಂಬರ್ 2019 ರಲ್ಲಿ ಮಥೊಂದು (ದುಸ್ಸಾಹಸಕ್ಕೆ ! )ದೊಡ್ಡ ಸಾಹಸಕ್ಕೆ ಕೈ ಹಾಕಿಯೇಬಿಟ್ಟಳು. ಇದನ್ನ ಸಾಹಸ ಅನ್ನಬೆಕೊ , ಹುಚ್ಛುತನ ಅನ್ನಬೇಕೋ ತಿಳಿಯುತ್ತಿಲ್ಲ. ಕೈ,ಕಾಲು, ಸೊಂಟ, ಕತ್ತು,ಬೆನ್ನು, ಒಕ್ಕಳು , ಬೆರಳುಗಳ ಮೇಲೆ ಟಾಟೂ ಹಾಕಿಸಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮೈ ತುಂಬಾ ಬಣ್ಣದ ಟಾಟೂ ಗೀಚಿಸಿಕೊಳ್ಳುವ ಖಯಾಲಿಯನ್ನ ಬೇಕಾದರೂ ಫ್ಯಾಷನ್ ಎಂದು ಒಪ್ಪಬಹುದು. ಆದರೆ, “ಅತಿರೇಕಕ್ಕೆ ಮತಿ ಕೇಡು ” ಎಂಬ ನಾನ್ನುಡಿ ನೆನಪಿಸುವ ಹಾಗಿದೆ ಈಕೆಯ ಇತ್ತೀಚಿನ ಟಾಟೂ ಕ್ರೇಜ್!
https://www.instagram.com/p/B7e1MD_D0Jk/?utm_source=ig_web_copy_link
ನವೆಂಬರ್ 2019ರಲ್ಲಿ ಅಂಬರ್ ತನ್ನ ಕಣ್ಣು ಗುಡ್ಡೆಯ ಕಲರ್ ಟಾಟೂ ರಚಿಸುವ (ದು) ಸಾಹಸ ಮಾಡಿಯೇ ಬಿಟ್ಟಳು. ಕಣ್ಣು ಗುಡ್ಡೆ ಗೆ ನೀಲಿ ( turquoise) ಬಣ್ಣ ತುಂಬಿಸಿದ್ದು ತನ್ನನ್ನು ತಾನು #BlueEyeWhiteDragon “ಬ್ಲೂ ಐ ವೈಟ್ ಡ್ರಾಗನ್” ಎಂದು ತನ್ನ ಇಂಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾಳೆ ! ತನ್ನ ಇಡೀ ದೇಹವನ್ನು 200 ಟಾಟೂ ವಿನಿಂದ ಮುಚ್ಚಿ ಕೊಂಡಿರುವ ಈ ಹುಡುಗಿ, #bodymodification ಹುಚ್ಚಿಗೆ ಬಿದ್ದಿದ್ದು, ಸೀಳು ನಾಲಿಗೆ, ಕಿವಿ ತಿರುವಿಕೆ , ಮುಖದ ಟಾಟೂ, ಡರ್ಮಲ್ ಜಿವೆಲರಿ ಟ್ರೆಂಡ್ ಗಳನ್ನು ಮಾಡಿಸಿಕೊಂಡಿದ್ದಾಳೆ. ಇದ್ದೆಲ್ಲಕ್ಕೂ ಬರೋಬರ್ರಿ $26000 ಖರ್ಚು ಮಾಡಿದ್ಲಾಳೆ ಏ ಹುಡುಗಿ!
https://www.instagram.com/p/B6m7e2EDJfH/?utm_source=ig_web_copy_link
ಕಣ್ಣು ಗುಡ್ಡೆಯ ಬಿಳಿಯ ಭಾಗವನ್ನು ಟಾಟೂ ಇಂಕ್ ನಿಂದ ಕಲರ್ ಮಾಡುವ ಈ ಟ್ರೆಂಡ್ ಅಷ್ಟೇ ಅಪಾರಕಾರಿಯೂ ಹೌದು ! 40 ನಿಮಿಷಗಳ ಕಾಲ ನಡೆದ ಈ ಟಾಟೂ ಕಾಲರಿಂಗ್ ಸರಿ ಹೋಗದ ಕಾರಣ ಈಕೆ ಮೂರು ತಿಂಗಳು ಗಳ ಕಾಲ ಕಣ್ಣು ಕಳೆದು ಕೊಂಡು ಕುರುಡತ್ವಕ್ಕೆ ಕಾಲಿಡಬೇಕಾಯಿತು ! ಈಕೆ ಹೇಳಿದ್ದೇನೆಂದರೆ
” ನನಗೆ ಟಾಟೂ ರಚಿಸಿದಾತ ನಾಲ್ಕು ಬಾರಿ ನನ್ನ ಕಣ್ಣು ಗುಡ್ಡೆಯ ಪದರಕ್ಕೆ ಇಂಕ್ ಇಂಜೆಕ್ಟ್ ಮಾಡಿದ, ಇದರ ನೋವು ಒಂದೇ ಬಾರಿಗೆ ಒಡೆದ ಗಾಜನ್ನು ನನ್ನ ಕಣ್ಣಿಗೆ ತರುಕಿದಾಗ ಆಗುವಷ್ಟು ಉರಿ, ನೋವು ಉಂಟಾಯಿತು. ಆತ ತುಂಬಾ ಜೋರಾಗಿ ನನ್ನ ಗುಡ್ಡೆಗೆ ಇಂಜೆಕ್ಟ್ ಮಾಡಿದ್ದರಿಂದ ನಾನು ಮೂರು ತಿಂಗಳು ಕುರುಡತ್ವಕ್ಕೆ ಕಾಲಿಡಬೇಕಾಯಿತು . ಆದರೂ ನಾನು ಟಾಟೂ ರಚಿಸಿಕೊಂಡಿದ್ದಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ. ಇದು ನನ್ನ ಜೀವನದ ದೊಡ್ಡ ಅನುಭವ. ನಾನು ಇದನ್ನು ಸಂಭ್ರಮಿಸುತ್ತಿದ್ದೇನೆ ” ಎಂದು ನುಡಿದಿದ್ದಾರೆ 24 ರ ಹರೆಯದ ಟಾಟೂ ಪ್ರಿಯೆ ಅಂಬೂರ್ .
|BlueEyeWhiteDragon ಅಂಬೂರ್ ಲೂಕ್
ScrelalTattoo ಕಣ್ಣು ಗುಡ್ಡೆಯ ಟಾಟೂ!
ಕಣ್ಣಲ್ಲಿ, ಕಣ್ಣು ಗುಡ್ಡೆಯ ಬಿಳಿಯ ಭಾಗವನ್ನು ಟಾಟೂ ಕಲರ್ ಮೂಲಕ ಬದಲಾಯಿಸುವ ಪರಿ ಹುಟ್ಟಿಕೊಂಡಿದ್ದು , ಸಿರಿಂಜ್ ನಲ್ಲಿ ಬಣ್ಣ ತುಂಬಿ, ಕಣ್ಣು ಗುಡ್ಡೆಯ ಮ್ಲ್ಪದರಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ ! ಇದರಿಂದ ಬಿಳಿಯ ಕಣ್ಣು ಗುಡ್ಡೆಯ ಭಾಗಕ್ಕೆ ನಿಮಗಿಷ್ಟವಾದ ಬಣ್ಣ ತುಂಬ ಬಹುದಾಗಿದೆ. ಪಾಶ್ಚಾತ್ಯ ರಾಷ್ಟ್ರ ಗಳಲ್ಲಿ ಈ ರೀತಿಯ ಪ್ರಯೋಗಗಳಿಗೇನೂ ಕಡಿಮೆ ಇಲ್ಲ. ಕೆಂಪು, ನೀಲಿ,ಕಪ್ಪು, ಹಸಿರು, ನೇರಳೇ ಬಣ್ಣದ ಕಣ್ಣು ಗುಡ್ಡೆಯ ಟಾಟೂ ಮಾಡಿಸಿಕೊಂಡವರು ಬಹಳಷ್ಟು ಮಂದಿ ಇದ್ದಾರೆ.
https://www.instagram.com/p/B6QxNhLBFsi/?utm_source=ig_web_copy_link
#EyeballTattoo ಕಣ್ಣು ಗುಡ್ಡೆಯ ಒಳಗೆ ಟಾಟೂ ಡಿಸೈನಿಂಗ್ ಕ್ರೇಜ್ !
ಇತ್ತೀಚಿನ ಆಧುನಿಕ ಫ್ಯಾಷನ್ ಜಗತ್ತಿನಲ್ಲಿ ಚಿತ್ರ ವಿಚಿತ್ರ ಫ್ಯಾಷನ್ ನದ್ದೇ ಪರ್ವ ಕಾಲ.ಕಣ್ಣು ಗುಡ್ಡೆಯ ಬಿಳಿಯ ಭಾಗದಲ್ಲಿ ಸ್ಟಾರ್, ಹಾರ್ಟ್, ಲವ್ , ಹೆಸರು, ಕರೆಸಿಕೊಳ್ಳುವ ಟ್ರೆಂಡ್ ಒಂದು ಶುರುವಾಗಿದೆ. ಬಹಳ ಭಯಾನಕ ಹಾಗೂ ವೈದ್ಯಕೀಯ ಲೋಕದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆ ಗೆ ಸಾಕ್ಷಿ ಯಾಗಿದೆ.
ಕಣ್ಣು ದೇಹದಲ್ಲಿ ಬಹಳ ಸೂಕ್ಷ್ಮವಾದ ಭಾಗ. ಹೊರ ಜಗತ್ತಿನ ಬಣ್ಣ ವನ್ನು ನಾವು ನೋಡುವುದೇ ಕಣ್ಣುಗಳಿಂದ . ಕಣ್ಣು ಗುಡ್ಡೆಯ ಒಳಗೆ ಟಾಟೂ ಮಾಡಿಸುವುದು , ಟಾಟೂ ಇಂಕ್ ಇಂಜೆಕ್ಟ್ ಮಾಡುವುದು ಅದೆಷ್ಟರಮಟ್ಟಿಗೆ ವೈದ್ಯಕೀಯ ವಾಗಿ
ಸರಿ ಎಂಬ ಚರ್ಚೆ ಗಳು ನಡೆಯುತ್ತದೆ ಇದೆ. ಇದರ ನಡುವೆಯೇ #EyeballTattoo ಕ್ರೇಜ್ ಜನರಲ್ಲಿ ಹೆಚ್ಚುತ್ತಲೇ ಇದೆ!
https://www.instagram.com/p/Bz-lopNAqUh/?utm_source=ig_web_copy_link
ಭಾರತಕ್ಕೂ ಕಾಲಿಟ್ಟ ScrelalTattoo
https://www.instagram.com/p/BZpWPgQHmwY/?utm_source=ig_web_copy_link
ದಿಲ್ಲಿ ಯ ಟಾಟೂ ಆರ್ಟಿಸ್ಟ್ , ಕರಣ್ ಕಿಂಗ್ ,ತನ್ನ ಕಣ್ಣು ಗುಡ್ಡೆಗೆ ಕಪ್ಪು ಇಂಕ್ ಇಂಜೆಕ್ಟ್ ಮಾಡಿಸಿಕೊಂಡು 2017 ರಲ್ಲಿ ಭಾರೀ ಚರ್ಚೆ ಗೆ ಗ್ರಾಸವಾಗಿದ್ದರು .
ScrelalTattooFailures ವೈಫಲ್ಯಗಳನ್ನು ಕಂಡುಕೊಳ್ಳುವ ಕಣ್ಣು ಗುಡ್ಡೆಯ ಟಾಟೂ ಕ್ರೇಜ್!
https://www.instagram.com/p/BO2xlPlF_d1/?utm_source=ig_web_copy_link
ಸುದ್ದಿದಿನ.ಕಾಂ|ವಾಟ್ಸಾಪ್|9980346243