ಲೈಫ್ ಸ್ಟೈಲ್

ಸೀರೆಗಳ ಮೇಲೂ ಸೋಷಿಯಲ್ ಮೀಡಿಯಾ ಎಫೆಕ್ಟ್! ಫೇಸ್ಬುಕ್ ಸೀರೆ! ಗೂಗಲ್ ಸೀರೆ ಗಳ ಕಮಾಲ್!

Published

on

ರುಂಗುರಂಗೀನ್  ಫ್ಯಾಷನ್ ದುನಿಯಾದಲ್ಲಿ ದಿನಕ್ಕೊಂದು ಹೊಸಾ ಫ್ಯಾಷನ್ ಟ್ರೆಂಡ್ ಆಗುತ್ತದೆ. ಇಂತಹದೊಂದು ಸ್ಟೈಲ್ ಸ್ಟೇಟ್ ಮೆಂಟ್ ಸಾರುವ “ಟಾಕಿಂಗ್ ಸ್ಯಾರೀ ” ಟ್ರೆಂಡ್ ಸೃಷ್ಟಿ ಆಗಿದೆ. ನ್ಯೂಸ್ ಪೇಪರ್-ಮ್ಯಾಗಜಿನ್ ಸೀರೆಗಳಂತೆಯೇ ಟಾಕಿಂಗ್ ಸೀರೆಗಳ ಮೇಲೂ ಪದಗಳು ಮುದ್ರಿತ ವಾಗಿದ್ದು.. ಟೀ ಶರ್ಟ್ ಗಳ ಮೇಲೆ ಕಾಣ ಸಿಗುವ ವಾಕ್ಯ ಗಳು ಸೀರೆಗಳ ಮೇಲೂ ಕಾಣಸಿಗುತ್ತವೆ..

ಫೇಸ್ಬುಕ್ ಸೀರೆ!

ಇಷ್ಟೇ ಅಲ್ಲ, ಸೋಷಿಯಲ್ ಮೀಡಿಯಾ ದ ಫೇಸ್ಬುಕ್, ಇಂಸ್ಟಾಗ್ರಾಂ, ಟ್ವಿಟ್ಟರ್…ಜಿ ಮೇಲ್.. ಹೀಗೆ ಸೋಷಿಯಲ್ ನೆಟ್ ವರ್ಕ್ ನ ಗುಂಪಿನ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ .

ಸ್ಮೈಲೀ ಸೀರೆ

ಸ್ಮೈಲೀ ಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮೊಬೈಲ್ ನಲ್ಲಿ ಕಾಣಸಿಗುವ ಸ್ಮೈಲೀ ಗಳ ಮುದ್ರಿತ ಸೀರೆ ಈಗ ಎಲ್ಲೆಲ್ಲೂ ವೈರಲ್!

ಗೂಗಲ್ ಸೀರೆ

ಅಂತರ್ಜಾಲದಲ್ಲಿ ದೊಡ್ಡ ಅಲೆ ಸೃಷ್ಟಿಸಿದ ಗೂಗಲ್ ಸೀರೆ ಈಗ ಅದೇ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ವಾಟ್ಸ್ ಅಪ್ ಸೀರೆ ಕ್ರೇಜ್!

ವಾಟ್ಸ್ ಅಪ್ ಕ್ರೇಜ್ ಜನರಲ್ಲಿ ಹೆಚ್ಚಿರೊದನ್ನ ಅರಿತ ಸೀರೆ ತಯಾರಕರು ವಾಟ್ಸ್ ಅಪ್ ಲೋಗೋ ಇರುವ ಸೀರೆಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಬಿಸಿ ತುಪ್ಪದಂತೆ ಈ ಸೀರೆಗಳ ಸೇಲ್ಸ್ ಕೂಡಾ ಹೆಚ್ಚಿದೆ.

ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾ ಎಫೆಕ್ಟ್ ಮಾನಿನಿಯರ ಸೀರೆ ಲೋಕದಲ್ಲೂ ಧೂಳೆಬ್ಬಿಸಿದ್ದು, ಸೀರೆ ವ್ಯಾಪಾರಿಗಳ ಬೊಕ್ಕಸವೂ ಫುಲ್, ಮಹಿಳಾಲೋಕವೂ ಖುಷ್!

Leave a Reply

Your email address will not be published. Required fields are marked *

Trending

Exit mobile version