ದಿನದ ಸುದ್ದಿ

ಆಧಾರ್ ನಂಬರ್ ಫಾರ್ವರ್ಡ್ ಸಂದೇಶ ಸುಳ್ಳು

Published

on

ಸುದ್ದಿದಿನ ಡೆಸ್ಕ್: ನಿಮ್ಮ ಮೊಬೈಲ್ ಕಾಂಟಾಕ್ಟ್ ನಲ್ಲಿ ಯುಡಿಎಐ ಹೆಸರಿನ ನಂಬರ್ ಸೇರ್ಪಡೆಯಾಗಿದ್ದರೆ ಹ್ಯಾಕ್ ಆಗಿದೆ ಎಂಬ ಸಂದೇಶಗಳು ಹರಿದಾಡುತ್ತಿದ್ದವು. ಇದು ಶುದ್ಧ ಸುಳ್ಳು ಎಂದು ಗೂಗಲ್ ಹೇಳಿದೆ.

ನಿಮ್ಮ ಆಂಡ್ರಾಯ್ಡ್ ಫೋನ್‌ನ Contacts ನಲ್ಲಿ UIDAI ಹೆಸರಿನಲ್ಲಿ ಒಂದು ನಂಬರ್ (1800-300-1947) ಸೇರ್ಪಡೆಯಾಗಿದ್ದರೆ, ಅದು ಹ್ಯಾಕರ್ ಸೇರಿಸಿದ್ದಲ್ಲ ಅಥವಾ ಆಧಾರ್ ಪ್ರಾಧಿಕಾರವೂ ಸೇರಿಸಿದ್ದಲ್ಲ.

ಇದು ಗೂಗಲ್ ತಪ್ಪಾಗಿ ಸೇರಿಸಿದ್ದು. ಭಯ ಪಡಬೇಕಾಗಿಲ್ಲ. ಅನಗತ್ಯ ಸುಳ್ಳು ಸುದ್ದಿಗಳನ್ನು ಫಾರ್ವರ್ಡ್ ಕೂಡ ಮಾಡಬೇಕಿಲ್ಲ. ಈ ನಂಬರಿಂದ ಏನೂ ಆಗುವುದೂ ಇಲ್ಲ. ಭಯ ಇದ್ರೂ, ಇಲ್ಲದಿದ್ರೂ, ಈ ಅನಗತ್ಯ ನಂಬರನ್ನು ಡಿಲಿಟ್ ಮಾಡಿಬಿಡಿ ಎಂದು ಗೂಗಲ್ ಹೇಳಿದೆ.

Leave a Reply

Your email address will not be published. Required fields are marked *

Trending

Exit mobile version