ಸಿನಿ ಸುದ್ದಿ
ನಕಲಿ ನೋಟು ಮುದ್ರಣ ಪ್ರಕರಣ | ಕಿರುತೆರೆ ನಟಿ ಬಂಧನ
ಸುದ್ದಿದಿನ ಡೆಸ್ಕ್ | ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಕೇರಳದ ಪ್ರಸಿದ್ದ ಕಿರುತೆರೆಯ ನಟಿ ಸೂರ್ಯಶಿಶಕುಮಾರ್ ಸೇರಿದಂತೆ ಈಕೆಯ ತಾಯಿ ಸಹೋದರಿಯನ್ನು ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ.
ಸಾಲ ತೀರಿಸಲು ಈ ನಟಿಯು ತನ್ನ ಮನೆಯಲ್ಲಿಯೇ ನಕಲಿ ನೋಟನ್ನು ತಯಾರಿಸುವ ಮುದ್ರಣಯಂತ್ರವನ್ನು ಹೊಂದಿದ್ದರು ಎಂದು ಮೂಲಗಳು ಬಹಿರಂಗ ಪಡಿಸಿವೆ.
500 ರೂ ಮುಖ ಬೆಲೆಯ ನೋಟುಗಳು
ಇವರು 500 ರೂ ಮುಖ ಬೆಲೆಯ ನೋಟುಗಳನ್ನು ಸಾಲ ತೀರಿಸಲು ಮುದ್ರಿಸಿತ್ತಿದ್ದರು ಎಂಬುದು ಪೊಲೀಸರ ತನಿಕೆಯ ಮೂಲಕ ಬಯಲಿಗೆ ಬಂದಿದೆ.
ಸುಮಾರು 8 ಲಕ್ಷರೂ ನಕಲಿ ನೋಟುಗಳನ್ನು ಕಳೆದ 8ಎಂಟು ತಿಂಗಳಿನಲ್ಲಿ ಮುದ್ರಿಸಿ್ದ್ದಾದ್ದಾರೆ ಎಂಬುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ನಟಿಯ ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪಾಣದ ಮನೆಯ ಎರಡನೇ ಮಹಡಿಯಲ್ಲಿ ಮುದ್ರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401