ದಿನದ ಸುದ್ದಿ

ಮೊಳಕಾಲ್ಮೂರು : ಸಾಲಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ

Published

on

ಸುದ್ದಿದಿನ ಡೆಸ್ಕ್ : ಸಾಲಬಾಧೆ ತಾಳಲಾರದೆ ಮೊಳಕಾಲ್ಮೂರು ತಾಲೂಕಿನ ಮುತ್ತಿಗಾರಹಳ್ಳಿ ಗ್ರಾಮದ ಬಿ.ಟಿ. ಸಣ್ಣರುದ್ರಪ್ಪ ಎಂಬ ರೈತ‌ ಡೆತ್ ನೋಟ್ ಬರೆದಿಟ್ಟು ಮೃತಪಟ್ಟಿದ್ದಾರೆ.

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಿ.ಟಿ. ಸಣ್ಣರುದ್ರಪ್ಪ ಅವರನ್ನು ಕೂಡಲೇ ಚಳ್ಳಕೆರೆ ಆಸ್ಪತ್ರೆಗೆ ತರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಬಿ.ಟಿ. ಸಣ್ಣರುದ್ರಪ್ಪ ಅವರು ವ್ಯವಸಾಯ ಸಹಕಾರ ಬ್ಯಾಂಕ್, ಪಿಎಲ್ ಡಿ ಬ್ಯಾಂಕ್ ಹಾಗೂ ವಿವಿಧೆಡೆ ಆರು ಲಕ್ಷ ರೂಪಾಯಿ ಸಾಲ ಮಾಡಿದ್ದರು. ಜಮೀನಿನಲ್ಲಿ ಕೊಳವೆ ಬಾವಿ ಕೂಡ ವಿಫಲವಾಗಿ ಸಮಸ್ಯೆ ಅನುಭವಿಸಿದ್ದರು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಮೊಳಕಾಲ್ಮೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version