ದಿನದ ಸುದ್ದಿ

ರೈತರ ವಿರೋಧದ ನಡುವೆ ಕಾಯ್ದೆ ತಿದ್ದುಪಡಿ ಅವಶ್ಯಕತೆ ಇದೆಯೇ..?

Published

on

  • ಬಿಂದು ಶ್ರೀ ಗೌಡ

ರೈತರ ಹೋರಾಟ ರಾಜ್ಯಕ್ಕೆ ಆಗಲಿ, ದೇಶಕ್ಕೆ ಆಗಲಿ ಹೊಸತಲ್ಲ. ರೈತರ ಹೋರಾಟಕ್ಕೆ ಕಾರಣಗಳು ಹಲವಾರು. ಭಾರತ ದೇಶದ ಬೆನ್ನೆಲುಬು ರೈತರು, ದೇಶದ ಶೇಕಡಾ 70 ಭಾಗ ವ್ಯವಸಾಯವೇ ಆಧಾರವಾಗಿರುವಾಗ ಕೇಂದ್ರ ಸರ್ಕಾರ ಕಳೆದ 7 ವರ್ಷಗಳಿಂದ ರೈತರಿಗೆ ನಾನಾ ರೀತಿಗಳಲ್ಲಿ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ ಇದು ಖಂಡನೀಯ.

ಅನ್ಯಾಯವಾಗಿರುವುದು ಅವೈಜ್ಞಾನಿಕ ಯೋಜನೆಗಳ, ಅನುದಾನದ ಕೊರತೆ , ಸಾಲ ಮನ್ನಾ ಮಾಡದಿರುವ ವಿಷಯದಲ್ಲಿ ಮಾಡಿದ್ದಾರೆ. ಈಗ ಸದ್ಯಕ್ಕೆ ಕಾಯ್ದೆ ತಿದ್ದು ಪಡಿ ಮಾಡುವ ಮೂಲಕ ರೈತರ ಬೆನ್ನ ಮೂಳೆ ಮುರಿದು ಮೂಲೆಯಲ್ಲಿ ಕೂರಿಸುವ ಯತ್ನ ಅಮಾನವೀಯ ಎನ್ನುವುದು ಸ್ವತಃ ಬಿಜೆಪಿ ಪಕ್ಷಕ್ಕೆ ತಿಳಿದರು ಸಹ, ತಮ್ಮ ಸ್ವಾರ್ಥ ಸಾಧನೆಗಾಗಿ ಕಾರ್ಪೊರೇಟ್ ಕಂಪನಿಗಳನ್ನು ಉದ್ದಾರ ಮಾಡಲು ಹೊರಟಿರುವುದು ಕೇವಲ ರೈತರ ಕೆಂಗಣ್ಣಿಗೆ ಮಾತ್ರವಲ್ಲದೆ ಜನ ಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ.

ಬಿಂದು ಶ್ರೀ ಗೌಡ

ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಹೋರಾಟಗಳು ಹೆಚ್ಚಾಗುತ್ತಿವೆ. ಇಂದು ರೈತರ ವಿರುದ್ಧ ಅವರ ಪ್ರತಿಭಟನೆಗಳನ್ನು ನಿಲ್ಲಿಸಲು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು, ಕ್ರಮಗಳು ಖಂಡನೀಯ. ಪ್ರತಿಭಟನೆ ದೇಶದ ಪ್ರತಿಯೊಬ್ಬ ಪ್ರಜೆಯ, ಪ್ರತಿಯೊಂದು ಸಂಘಟನೆಯ ಸಾಂವಿಧಾನಿಕ ಹಕ್ಕು.

ಅದನ್ನು ಕಸಿದುಕೊಳ್ಳುವ ಸಲುವಾಗಿ ಅವರ ಮೇಲೆ ಪೊಲೀಸರನ್ನು ಬಳಸಿಕೊಂಡು ಅಮಾನವೀಯ ಹಲ್ಲೆ , ಅರ್ಶ್ವ ವಾಯು ಬಳಕೆ , ಗಾಳಿಯಲ್ಲಿ ಗುಂಡು ಇನ್ನೂ ಹಲವಾರು ರೀತಿಯಲ್ಲಿ ಅವರನ್ನು ಹತ್ತಿಕ್ಕಲು ಪ್ರಯತ್ನ ನೆಡೆಯುತ್ತಿದೆ.

ಇದ್ಯಾವುದೂ ಕೇಂದ್ರ ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ , ಈ ಹಿಂದೆ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇದ್ದಾಗ ಹೋರಾಟಗಳು ನಡೆದಿದ್ದರೂ ಸಹ, ಹೋರಾಟಗಾರರ, ರೈತರ ವಿರುದ್ಧ ಎಂದೂ ಸಹ ಇಂತಹ ಕ್ರೂರ ಕ್ರಮಗಳು ಜರುಗಿರಲಿಲ್ಲ.

ಈ ಕೂಡಲೇ ಕೇಂದ್ರ ಸರ್ಕಾರ ಇದರ ಬಗ್ಗೆ ಗಮನ ಹರಿಸಿ, ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು, ರೈತರ ಕೂಗಿಗೆ ಸ್ಪಂದಿಸಬೇಕು. ರೈತರಿಗೆ ಬೇಡವಾದ ತಿದ್ದುಪಡಿ ಮಾಡುವ ಅವಶ್ಯಕತೆ ಆದರೂ ಬಿಜೆಪಿ ಪಕ್ಷದ ಕೇಂದ್ರ ಆಡಳಿತಕ್ಕೆ ಏನಿದೆ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version