ದಿನದ ಸುದ್ದಿ
ಸಮೃದ್ಧ ಕೃಷಿಗೆ ಮಂತ್ರ ಹೇಳ್ಬೇಕಂತೆ
ಸುದ್ದಿದಿನ ಡೆಸ್ಕ್: ಭತ್ತದ ಬೆಳೆ ಬೆಳೆಯಲು ರೈತರು ತಮ್ಮ ಜಮೀನಿನಲ್ಲಿ ದಿನಕ್ಕೆ ಅರ್ಧ ಗಂಟೆ ಕಾಲ ವೇದ ಮಂತ್ರ ಹೇಳಬೇಕು ಎಂದು ಗೋವಾ ಕೃಷಿ ಸಚಿವ ವಿಜಯ್ ಸರ್‍ದೇಸಾಯ್ ಅವರು ನೀಡಿರುವ ಹೇಳಿಕೆ ದೇಶಾದ್ಯಂತ ಚರ್ಚೆಗೆ ಒಳಗಾಗಿದೆ.
ಗೋವಾದಲ್ಲಿ ಬ್ರಹ್ಮಾಂಡ ಕೃಷಿ ಪದ್ಧತಿ ಅಳವಡಿಸಿರುವ ಜಮೀನೊಂದಕ್ಕೆ ಭೇಟಿ ನೀಡಿದ ಅವರು ಗೋವಾ ಸರಕಾರ ಬ್ರಹ್ಮಾಂಡ ಕೃಷಿಗೆ ಇನ್ನಷ್ಟು ಬೆಂಬಲ ನೀಡುವುದಾಗಿ ತಿಳಿಸಿದೆ.
ಭತ್ತದ ಬೆಳೆ ಸಮೃದ್ಧವಾಗಿ ಬೆಳೆಯಬೇಕೆಂದರೆ ಪ್ರತಿ ದಿನ ಬೆಳಗ್ಗೆ ರೈತರು ತಮ್ಮ ಜಮೀನುಗಳಲ್ಲಿ ಅರ್ಧ ಗಂಟೆ ಕಾಲ ವೇಧ ಮಂತ್ರ ಹೇಳಬೇಕು. ಆಗ ಮಂತ್ರಗಳಲ್ಲಿರುವ ಕಾಸ್ಮಿಕ್ ಶಕ್ತಿಯು ಭತ್ತದ ಬೆಳೆಯ ಮೇಲೆ ಆವಾಹನೆಯಾಗಿ ಸಮೃದ್ಧ ಫಸಲು ಕೈ ಸೇರುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಜಯ್ ಸರ್ ದೇಸಾಯ್ ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ.
ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಸಚಿವ ನೀಡಿರುವ ಹೇಳಿಕೆಯು ಕಮಲ ಪಾಳಯವನ್ನು ಇನ್ನಷ್ಟು ಅವಮಾನಕ್ಕೀಡುಮಾಡಿದೆ. ಪುರಾಣದ ಕಾಲದಲ್ಲೇ ವೈಫೈ ಬಳಕೆ ಇತ್ತು ಎಂದು ಹೇಳುವ ಮೂಲಕ ತ್ರಿಪುರಾ ಮುಖ್ಯಮಂತ್ರಿ ಬಿಪುಲ್ ಕುಮಾರ್ ದಏವ್ ಅವರು ಕೇಸರಿ ಪಕ್ಷವನ್ನು ಅವಮಾನಕ್ಕೀಡುಮಡಿದ್ದರು.