ದಿನದ ಸುದ್ದಿ
ಸ್ವಂತ ವಾಹನ ತೊಳೆಯಲು ಹೋಗಿ ಪ್ರಾಣ ಕಳೆದುಕೊಂಡ ತಂದೆ ಹಾಗೂ ಮಗ
ಸುದ್ದಿದಿನ,ಧಾರವಾಡ: ತಮ್ಮ ಸ್ವಂತ ವಾಹನವನ್ನು ಕೆರೆಯಲ್ಲಿ ತೊಳೆಯಲು ಹೋಗಿ ಕಾಲು ಜಾರಿ ಬಿದ್ದು, ನೀರಲ್ಲಿ ಮುಳುಗಿ ತಂದೆ ಹಾಗೂ ಮಗ ಇಬ್ಬರು ದಾರುಣವಾಗಿ ಸಾವನಪ್ಪಿರುವ ಘಟನೆ ಧಾರವಾಡದ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಗದಿಗಪ್ಪ ಅಗ್ಸಿಮನಿ (45) ಹಾಗೂ ರವಿ (10 ) ಮೃತ ತಂದೆ ಮಗ ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ತಂದೆ ಹಾಗೂ ಮಗ ತಮ್ಮ ಮನೆಯಿಂದ ವಾಹನವನ್ನು ಗ್ರಾಮದ ಕೆರೆಗೆ ತೆಗೆದುಕೊಂಡು ತೊಳೆಯಲು ಮುಂದಾಗಿದ್ದಾರೆ. ಈ ವೇಳೆ ಮಗ ರವಿ ನೀರಿನಲ್ಲಿ ನಿಂತಿದ ವಾಹನದ ಭಾಗ ತೊಳೆಯುತ್ತಿರುವಾಗ ಕಾಲು ಜಾರಿ ಇದೆ. ಇದನ್ನು ನೋಡಿದ ತಂದೆ ಗದಿಗೆಪ್ಪ ಮಗನನ್ನು ಉಳಿಸಿಕೊಳ್ಳಲು ಮುಂದಾಗಿದ್ದಾನೆ. ಆದರೆ ಮಗ ಕೆರೆಯಲ್ಲಿ ಆಳಕ್ಕೆ ಹೋಗಿದ್ದ ಮಗನ ಜೊತೆ ತಂದೆಯು ಆಳಕ್ಲೆ ಹೋಗಿ ನೀರಿನಲ್ಲಿ ಮೃತರಾಗಿದ್ದಾರೆ.
ಇನ್ನೂ ಸುದ್ದಿ ತಿಳಿದು ಗ್ರಾಮದ ಹೊರವಲಯಕ್ಕೆ ಆಗಮಿಸಿದ ಗ್ರಾಮಸ್ಥರು ಇಬ್ಬರು ಮೃತ ದೇಹವನ್ನು ಕೆರೆಯಿಂದ ಹೊರಗಡೆ ತೆಗೆದು, ಸ್ಥಳೀಯ ವೈದ್ಯರನ್ನು ಸ್ಥಳಕ್ಕೆ ಕರೆಯಿಸಿ ಪ್ರಾಣ ಉಳಿಸಿಲು ಪ್ರಯತ್ನಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ಇಬ್ಬರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಭೇಟಿನೀಡಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿ, ಪರಿಶೀಲನೆ ಕೈಗೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243