ಲೈಫ್ ಸ್ಟೈಲ್

ಸೆಲಿಬ್ರಿಟಿ ಗಳ Fathers Day..ಹೀಗಿತ್ತು…ನೋಡಿ..!

Published

on

ಪ್ಪ ಅನ್ನೋ ಈ ಎರಡಕ್ಷರದ ಪದದಲ್ಲಿ ಇಡೀ ಭೂಮಂಡಲವೇ ಅಡಗಿದೆ. ಜನ್ಮದಾತ ಅಪ್ಪ..ಬಿಸಿಲು-ಮಳೆ-ಗಾಳಿ ಲೆಕ್ಕಿಸದೆ ಜೀವಮಾನವಿಡೀ ತನ್ನ ಕುಟುಂಬ..ಮಕ್ಕಳಿಗಾಗಿ.. ಬೆವರು ಸುರಿಸುತ್ತಾನೆ. ತಾಯಿ ದೇವರಂತೆಯೇ ತಂದೆ…ಆದರ್ಶ ತೋರುವ ಮಾದರಿ ಮಾರ್ಗದರ್ಶಕನಾಗಿ ಜಿವನವಿಡೀ…ಕೈ ಹಿಡಿದು ನಡೆಸುವ ನಿತ್ಯ ದೈವ.

ಅಂಗಿಯ ಬೆವರಿನಲ್ಲೇ ಪ್ರೀತಿಯ ಕಂಪು ಸುಸುವ ಪ್ರೀತಿ ಪಾತ್ರ ತಂದೆಗೆ ಇಡೀ ಜನುಮ ಖುಣಿಯಾಗಿಬೇಕು. ಕೈಗೂಸನ್ನ ಹೆಗಲ ಮೇಲೆ ಹೊತ್ತು ತಿರುಗುವ ಈ ಮಹಾನುಭಾವನಿಗೆ ಅನಂತ ಅನಂತ ವಂದನೆಗಳು..

ಜೂನ್ 17 2018 ” ತಂದೆಯರ ದಿನಾಚರಣೆ “ಅಂಗವಾಗಿ ಇಡೀ ಮನುಕುಲವೇ ಈ ಮಹಾಮಹಾನುಭಾವನನ್ನ ..ಅವನ ತ್ಯಾಗ-ಪ್ರೀತಿ-ಮಮಕಾರವನ್ನ ಕೊಂಡಾಡುತ್ತಿದೆ.ಹಾಗಾದರೆ ಬನ್ನಿ, ಸೆಲಿಬ್ರಿಟಿಗಳು ಯಾವ ರೀತಿ ಈ ವಿಶೇಷ ದಿನವನ್ನು ಆಚರಿಸುತ್ತಿದ್ದಾರೆ…ಅನ್ನುವುದರ ಮಾಹಿತಿ ಇಲ್ಲಿದೆ…

ಕನ್ನಡ ಚಿತ್ರರಂಗದ ಚಾಲಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರು ತಂದೆಯರ ದಿನಾಚರಣೆ ಯಂದು ತಮ್ಮ ತಂದೆಯನ್ನು ನೆನೆದು ಸೋಷಿಯಲ್ ಮೀಡಿಯಾ ದಲ್ಲಿ ಈಗ ವೈರಲ್ ಆಗಿದೆ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ.

ದಿನಕರ್ ತೂಗುದೀಪ ಅವರೂ ತಂದೆಯ ನೆನೆದು, ಅವರ ಭಾವಚಿತ್ರ ಶೇರ್ ಮಾಡಿ ಕೊಂಡಿದ್ದಾರೆ.

ನವರಸ ನಾಯಕ ಜಗ್ಗೇಶ್ ಅವರೂ ಸಹ ತಮ್ಮ ಪತ್ನಿಯ ಟ್ವೀಟ್ ಗೆ ಉತ್ತರಿಸುತ್ತ..ತಂದೆಯ ಮಹತ್ವವನ್ನು  ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಕನ್ನಡ ಚಿತ್ರರಂಗದ ಹೆಸರಾಂತ ನಾಯಕ ನಟ ಶ್ರೀ ಮುರಳಿ… ತಮ್ಮ ಮಗನ ಮುದ್ದು ಉಡುಗೊರೆ.. ಚಿತ್ರ ವನ್ನು ಸೋಷಿಯಲ್ ಮೀಡಿಯಾ ದಲ್ಲಿ ಈಗ ವೈರಲ್ ಆಗಿದೆ ವೇರ್ ಮಾಡಿ ಕೊಂಡಿದ್ದಾರೆ..ಹಾಗೆಯೇ ಅವರ ತಂದೆಯೊಂದಿಗೆ ಚಿತ್ರ ಶೇರ್ ಮಾಡಿ ತಂದೆಯ ದಿನಾಚರಣೆಗೆ ಶುಭ ಕೋರಿದ್ದಾರೆ.

https://m.facebook.com/story.php?story_fbid=1033704706786778&id=230164010474189

ನಟಿ ಹರಿಪ್ರಿಯ ಅಗಲಿರುವ ಅವರ ತಂದೆಯ ನೆನೆದು..ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು, ತಂದೆ ಯೊಂದಿಗಿನ ಅವರ ಚಿತ್ರ ಟ್ವೀಟ್ ಮಾಡಿದ್ದಾರೆ.

ಕನ್ನಡದ ಬಿಗ್ ಬಾಸ್ ಖ್ಯಾತಿಯ ನಟಿ ನೀತೂಶೆಟ್ಟಿ ಅವರು ಸೋಷಿಯಲ್ ಮೀಡಿಯಾ ದಲ್ಲಿ ತಮ್ಮ  ತಂದೆಯೊಂದಿಗೆ ಚಿತ್ರವನ್ನು  ಹಂಚಿಕೊಂಡು ತಂದೆಗೆ ವಿಷ್ ಮಾಡಿದ್ದಾರೆ.

https://m.facebook.com/story.php?story_fbid=10214578265463794&id=1036268701

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಖ್ಯಾತಿಯ ಶ್ವೇತ ಶ್ರೀವಾಸ್ತವ್ ಕೂಡಾ ಟ್ವೀಟ್ ಮಾಡಿದ್ದಾರೆ.

ಶಾರುಖ್ ಖಾನ್ ತಮ್ಮ ಮಗನ ಡ್ರಾಯಿಂಗ್ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.

ಖ್ಯಾತ ಕ್ರಿಕೆಟ್ ಪಟು ಸುರೇಶ್ ರೈನ್ ತಮ್ಮ ಮುದ್ದು ಮಗು ಬಿಡಿಸಿದ ಗ್ರೀಟಿಂಗ್ ಕಾರ್ಡ್ ಚಿತ್ರವನ್ನು ವೇರ್ ಮಾಡಿ ಕೊಂಡಿದ್ದಾರೆ..

ಅಮಿತಾಬ್ ಬಚ್ಚನ್ , ಆಲಿಯಾಭಟ್, ಸೊನಾಕ್ಷಿ ಸಿನ್ಹಾ…ಅನುಷ್ಕಾ ಶರ್ಮ..ಹೀಗೆ ಹಲವಾರು ಸೆಲಿಬ್ರಿಟಿ ಗಳು ತಂದೆಯರ ದಿನಾಚರಣೆ ಯನ್ನು ವಿಶೇಷವಾಗಿ ಆಚರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version