/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ದಂಡಿನ ಮಾರಿಯಮ್ಮ ಮಹಾತ್ಮೆ..!

Published

on

ಸುದ್ದಿದಿನ, ಶಿವಮೊಗ್ಗ : ವರ್ಷದ ಪ್ರಾರಂಭದಲ್ಲಿ ಮೂದಲ ತಿಂಗಳು ಈ ಜಿಲ್ಲೆಯ ಸುತ್ತ ಮುತ್ತ ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ಈ ದೇವಿಯದೆ ಭರ್ಜರಿ ಉತ್ಸವ, ಎಲ್ಲೆಂದರಲ್ಲಿ ದೇವಿಯ ಭಕ್ತಿ ಪರಾಕಾಷ್ಠೆಯಲ್ಲಿ ಮುಳುಗಿದ ಭಕ್ತ ಸಾಗರ. ದೇವಿಯ ಜಾತ್ರೆ ಬಂತು ಅಂದರೆ ಸಾಕು ಗ್ರಾಮಗಳು ಶೃಂಗಾರದಲ್ಲಿ , ಭಕ್ತನಂದನದಲ್ಲಿ ಮುಳಿಗಿಹೋಗಿರುತ್ತೆ. ದೇವಿಯ ಹಬ್ಬಕ್ಕೆ ಊರು ಟಾರುಗಳೆಲ್ಲ ಬಣ್ಣ ಬಣ್ಣದಿಂದ ಅಲಂಕಾರದಿಂದ ವಧುವಣಗಿತ್ತಿಯಂತೆ ಜಗಮಗಿಸುತಿರುತ್ತದೆ.

ಅಬಬ್ಬ ಇಷ್ಟೊಂದೆಲ್ಲ ಪೀಠಿಕೆ ಹಾಕ್ತಿದಿರಾ ಅಷ್ಟಕ್ಕೂ ಯಾವ ದೇವಿ ಏನಿದೆ ಅಂತಹ ಶಕ್ತಿ, ಅಷ್ಟಕ್ಕೂ ದೇವಿ ಉತ್ಸವ ಎಲ್ಲಿ ಅನ್ಕೊಂಡ್ರಾ ಹಾಗಾದ್ರೆ ಈ ಸ್ಟೋರಿ ನೋಡಿ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕಲ್ಪನಹಳ್ಳಿ ಗ್ರಾಮದಲ್ಲಿ ತಲ ತಲಾಂತರಗಳಿಂದ ಹಲವಾರು ಧಾರ್ಮಿಕ ಪೂಜಾ ಕೈಂಕರ್ಯಗಳ ವಿಧಿವಿಧಾನಗಳಿಗೆ ಸಾಕ್ಷಿಯಾಗಿರುವ ಐತಿಹಾಸಕ ಹಿನ್ನೆಲೆಯನ್ನು ಹೂಂದಿರುವ ಶ್ರೀ ದಂಡಿನ ಮಾರಿಯಮ್ಮ ಜಾತ್ರೆ ಗ್ರಾಮದಲ್ಲಿ ಎರಡು ವರ್ಷಕ್ಕೊಂದುಸಾರಿ ನಡೆಯುವ ಅಧೋರಿ ಮೆರವಣಿಗೆಗೆ ಸಾಕ್ಷಿಯಾಗಿದೆ. ಬೇಡಿದ ಬಯಕೆಗಳನ್ನು ಹರಕೆಗಳನ್ನು ಇಡೇರಿಸುವ ಶಕ್ತಿಮಾತೆ ಈ ದೇವತೆ. ಮೂರು ದಿನಗಳ ಕಾಲ ನಡೆಯುವ ಈ ಮಾರಿಯಮ್ಮನ ದರ್ಶನ‌ಪಡೆಯೊಕ್ಕೆ ಭಕ್ತಸಾಗರವೇ ಹರಿದು ಬಂದಿದೆ.

ವಿಶೇಷ ಅಂದ್ರೆ ದೇವಿಯ ಮೂರ್ತಿಯನ್ನು ಗ್ರಾಮದ ರಾಜ ಬೀದಿಯಲ್ಲಿ ಮೆರವಣಿಗೆ ಹೋಗುವ ಮುನ್ನ ದೇವಿಯನ್ನು ಅಲಂಕಾರ ಮಾಡಿ ದೃಷ್ಟಿ ತೆಗೆಯುತ್ತಾರೆ. ಆಶ್ಚರ್ಯ ಎಂದ್ರೆ ದೃಷ್ಟಿ ತೆಗೆಯಬೇಕಾದ್ರೆ ಕನ್ನಡಿಯೇ ಹೂಡೆದುಹೋಗುತ್ತಂತೆ ಅಷ್ಟೊಂದು ಸುಂದಾರವಾಗಿ ಅಲಂಕಾರ,ಶೃಂಗಾರ ಗೊಂಡಿರುವ ಆಭರಣ ಸುಂದರಿ ಈ ಗ್ರಾಮ ದೇವತೆ..ಮೆರವಣಿಗೆಯಲ್ಲಿ ಡೋಳ್ಳು ಕುಣಿತ, ತಮಟೆ ವಾದ್ಯ, ಬೊಂಬೆ ಆಟ,ಕೀಲ್ ಕುದುರೆ ಕುಣಿತ,ಫಲ ಪಂದ್ಯ,ಚಾಟಿ ಎಟಿನ ಹರಕೆ ಕುಣಿತ,ಪರಶುರಾಮ ನೃತ್ಯ ,ಚಂಡೆ ವಾದ್ಯ,ಹೀಗೆ ಹಲವಾರು ಸಾಂಸ್ಕೃತಿಕಕಾರ್ಯಕ್ರಮಗಳೂಂದಿಗೆ ಗ್ರಾಮದ ರಾಜ ಬೀದಿಯಲ್ಲಿ ಗರ್ಭ ಗುಡಿಯವರೆಗು ಮೆರವಣಿಗೆ ಸಾಗಿತ್ತು.

ಇನ್ನು ಗ್ರಾಮದ ಒಳಿತಿಗಾಗಿ ಗ್ರಾಮದಲ್ಲಿ ಬಡವರು ಶ್ರೀಮಂತರೆನ್ನದೆ ಪ್ರತಿ ಕುಟುಂಬವರ್ಗಗಳು ಗ್ರಾಮ ದೇವತೆಯ ಭಕ್ತಿ ಪರಾಕಟಾಕ್ಷೆಯಲ್ಲಿ ಪಾತ್ರರಾಗಿದ್ದು ವಿಶೇಷ. ಇನ್ನು ದೇವಿಯನ್ನು ನೋಡಲು ಹಲವಾರು ಭಾಗಗಳಿಂದ ಭಕ್ತ ಸಾಗರ ಹರಿದು ಬಂದಿತ್ತು.. ನೀವು ಸಹ ಒಂದು ಬಾರಿ ಶ್ರೀ ದಂಡಿನ ಮಾರಿಯಮ್ಮನ‌ ದರ್ಶನ ಪಡೆದು ಪುನಿತರಾಗಿ.

ಪತ್ರಕರ್ತ ,ಶಶಿಕುಮಾರ್ ಲಕ್ಷ್ಮಿ ಶಿವಮೊಗ್ಗ

 

 

 

 

 

 

ಸುದ್ದಿದಿನ.ಕಾ|ವಾಟ್ಸಾಪ್|9986715401

Trending

Exit mobile version