ದಿನದ ಸುದ್ದಿ
ಈ ಬಾರಿ ಸರಳವಾಗಿ ನಡೆದ ಚಿಕ್ಕತುಮಕೂರು ಊರುಹಬ್ಬ
ಸುದ್ದಿದಿನ ಡೆಸ್ಕ್: ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕತುಮಕೂರು ಗ್ರಾಮದಲ್ಲಿ ಈ ಬಾರಿ ಕೊರೊನ ವೈರಸ್ ಹಾವಳಿಯಿಂದಾಗಿ ಗ್ರಾಮಸ್ಥರೆಲ್ಲ ಸರಳವಾಗಿ ಎಲ್ಲಮ್ಮ ದೇವಿಯ ಊರಿನ ಹಬ್ಬ ಆಚರಿಸಿದರು.
ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಚಿಕ್ಕತುಮಕೂರು ಎಲ್ಲಮ್ಮ ದೇವಿಯ ಜಾತ್ರೆಯನ್ನು ಭಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು, ಆದರೆ ಈ ಬಾರಿ ಇಡೀ ವಿಶ್ವದಾದ್ಯಂತ ಹಾಗೂ ಭಾರತ ಅಲ್ಲದೇ ಕರ್ನಾಟಕದಾದ್ಯಂತ ಮೂಲೆಮೂಲೆಗಳಲ್ಲಿ ಕೊರೊನ ವೈರಸ್ ಹಾವಳಿ ಹೆಚ್ಚಾದ್ದರಿಂದ ಚಿಕ್ಕತುಮಕೂರು ಗ್ರಾಮಸ್ಥರು ಸರ್ಕಾರದ ನಡವಳಿ ಪ್ರಕಾರ ವಿಜೃಂಭಣೆಯಿಂದ ಆಚರಿಸದೆ, ಸರಳವಾಗಿ ಊರಿನ ಹಬ್ಬ ಆಚರಿಸಿ ಎಲ್ಲಮ್ಮ ದೇವಿಯ ಕೃಪೆಗೆ ಪಾತ್ರರಾದರು.
ಎಲ್ಲಮ್ಮ ದೇವಿಯ ಪೂಜೆ ಮುಂಜಾನೆ ನಾಲ್ಕು ಗಂಟೆಯಿಂದ ನಡೆಯಿತು. ಊರಿನ ಗ್ರಾಮಸ್ಥರು ಸಾಮಾಜಿಕ ಅಂತರದೊಂದಿಗೆ ದೇವಿಯ ಪೂಜೆಯಲ್ಲಿ ಸಾಂಪ್ರದಾಯಿಕವಾಗಿ ಪಾಲ್ಗೊಂಡು ತಮ್ಮ ತಮ್ಮ ಮನೆಯಲ್ಲಿಯೇ ಆರತಿ ಬೆಳಗಿ ದೇವಿಯಲ್ಲಿ ಆಶೀರ್ವಾದ ಬೇಡಿಕೊಂಡರು.
ಇಡೀ ಜಗತ್ತಿಗೆ ತಗುಲಿರುವ ಮಹಾಮಾರಿ ಕೊರೊನ ವೈರಸ್ ಕೊನೆಗಾಣಲೆಂದು ದೇವಿಯಲ್ಲಿ ಊರಿನ ಗ್ರಾಮಸ್ಥರು ಬೇಡಿಕೊಂಡರು. ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರು, ಮಕ್ಕಳು, ಸಾರ್ವಜನಿಕರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243