ರಾಜಕೀಯ
ಮತ್ತೆ ವಿವಾದಕ್ಕೆ ಸಿಲುಕಿದ ಎಂಪಿ ರೇಣುಕಾಚರ್ಯ
ದಾವಣಗೆರೆ: ಒಂದಿಲ್ಲೊಂದು ವಿವಾದದಿಂದ ಚರ್ಚೆಗೆ ಈಡಾಗುತ್ತಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚರ್ಯ ಈಗ ಮತ್ತೊಂದು ವಿವಾದಕ್ಕೆ ಸಿಲುಕಿ ಕೊಂಡಿದ್ದಾರೆ.
ನ್ಯಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಸಿಡಿ ಉತ್ಸವ ದೇವರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎತ್ತಿನ ಗಾಡಿಯಲ್ಲಿ ಸಿಡಿ ಕಂಬ ಕಟ್ಟಿ ಮೆರವಣಿಗೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಸಿಡಿ ಕಂಬಕ್ಕೆ ಕಟ್ಟಿಕೊಂಡು ದಲಿತ ಮಹಿಳೆ ಸಿಡಿಯಾಡುತ್ತಿದ್ದ ಎತ್ತಿನ ಗಾಡಿಯನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚರ್ಯ ಚಲಾಯಿಸುತ್ತಿದ್ದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಮತ ಕ್ಷೇತ್ರದ ಕೆಂಚಿಕೊಪ್ಪ ಗ್ರಾಮದಲ್ಲಿ ನಡೆದ ಸಿಡೆ ಉತ್ಸವ ದೇವರ ಕಾರ್ಯಕ್ರಮದಲ್ಲಿ ಸ್ವತಃ ಎತ್ತಿನಗಾಡಿ ಚಲಾಯಿಸಿದ ಅವಿಸ್ಮರಣೀಯ ಕ್ಷಣಗಳು… https://t.co/jAQ0kJqdTe