ದಿನದ ಸುದ್ದಿ
ತುಂಬಿದ ಭದ್ರಾ: ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಪ್ರಸ್ತಾವನೆ
ಸುದ್ದಿದಿನ ಡೆಸ್ಕ್: ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯ ತುಂಬಿದ್ದು, ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರು ಹರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಕುರಿತು ಭದ್ರಾ ಯೋಜನೆ ಸಲಹೆ ಸಮಿತಿ ಸಹ ಕಾರ್ಯದರ್ಶಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಮುಂಗಾರು ಹಂಗಾಮಿ ನೀರು ಹರಿಸುವ ಸಂಬಂಧಿಸಿದಂತೆ ತಾತ್ಕಾಲಿಕ ವೇಳಾಪಟ್ಟಿ ತಯಾರಿಸಿ ಸರ್ಕಾರದ ಅನುಮತಿ ಕೋರಿದ್ದಾರೆ.
ಈ ಕುರಿತು ಭದ್ರಾ ಯೋಜನೆ ಸಲಹೆ ಸಮಿತಿ ಸಭೆಯಲ್ಲಿ ಚರ್ಚಿಸಿದ್ದು, ಅಚ್ಚುಕಟ್ಟು ಪ್ರದೇಶದ ರೈತರ ಅನುಕೂಲಕ್ಕೆ ನೀರು ಹರಿಸುವುದು ಸೂಕ್ತ ಎಂಬ ನಿರ್ಣಯ ವ್ಯಕ್ತವಾಗಿದೆ. ಅದರಂತೆ ಅನುಮತಿ ನೀಡಬೇಕು ಎಂದು ಭದ್ರಾ ಯೋಜನೆ ಸಲಹೆ ಸಮಿತಿ ಸಹ ಕಾರ್ಯದರ್ಶಿ ಕೋರಿದ್ದಾರೆ.