ದಿನದ ಸುದ್ದಿ

ತುಂಬಿತು ಕೆ ಆರ್ ಎಸ್ ಡ್ಯಾಂ | ಬಾಗಿನ ಅರ್ಪಿಸಲಿದ್ದಾರೆ ಹೆಚ್ ಡಿ ಕೆ

Published

on

ಸುದ್ದಿದಿನ, ಮೈಸೂರು | ರಾಜ್ಯದ ಪ್ರಮುಖ ಜಲಾಶಯವಾಗಿರುವ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟವು ಈಗಾಗಲೇ 121.40 ಅಡಿಗೆ ಏರಿದೆ. ಜಲಾಶಯ ತುಂಬಲು ಇನ್ನು ಕೇವಲ 3 ಅಡಿಯಷ್ಟೇ ಬಾಕಿ ಉಳಿದಿದೆ.

ಕಾವೇರಿ ಜಲಾನಯನ ಪ್ರದೇಶಕ್ಕೆ ಸೇರಿರು ಕೊಡಗು, ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಸುರಿಯುತ್ತಿರುವುದರ ಪರಿಣಾಮ ಕೆಆರ್ ಎಸ್ ಡ್ಯಾಂ ಮೈದುಂಬಲು ಸಜ್ಜಾಗಿದೆ.

ಕೇವಲ ಇನ್ನೆರಡು ದಿನಗಳಲ್ಲಿ ಜಲಾಶಯ ತುಂಬಿ ಹರಿಯಲಿದ್ದು , ಜುಲೈ 20 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಾವೇರಿಗೆ ಬಾಗಿನ ಅರ್ಪಿಸಲು ತೀರ್ಮಾನಿಸಿದ್ದಾರೆ.

ನಿನ್ನೆ (ಶುಕ್ರವಾರ) ಸಂಜೆ ಸುಮಾರು 6ಗಂಟೆಯಷ್ಟೊತ್ತಿಗೆ ಕೆಆರ್ ಎಸ್ ಜಲಾಶಯ 121.40 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಸಂಪೂರ್ಣ ತುಂಬಲು ಇನ್ನು ಕೇವಲ 3 ಅಡಿಯಷ್ಟೇ ಬಾಕಿಯುಳಿದಿದೆ. ಕೆಆರ್ ಎಸ್ ನ ಇಂದಿನ ಒಳ‌ ಹರಿವು 37,950 ಕ್ಯುಸೆಕ್ ಇದ್ದು, ಹೊರ ಹರಿವು 3916ಕ್ಯುಸೆಕ್ ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version