ಸಿನಿ ಸುದ್ದಿ
ಚಿತ್ರನಟ ದುನಿಯಾ ವಿಜಯ್ ಮೇಲೆ ಎಫ್ ಐ ಆರ್ ದಾಖಲು
ಸುದ್ದಿದಿನ,ಬೆಂಗಳೂರು : ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ನಟ ದುನಿಯಾ ವಿಜಯ್ ಮೇಲೆ ದಾಖಲಿಸಲಾಗಿದೆ.
ಮಾಸ್ತಿಗುಡಿ ಚಿತ್ರಣದ ಸಾವು ಪ್ರಕರಣ ಸಂಬಂಧ ನಿರ್ಮಾಪಕ ಸುಂದರ್ ಪಿ ಗೌಡರ ರಾಮನಗರ ಜೆಎಂಎಫ್ ಸಿ ಕೋರ್ಟ್ ನಿಂದ ವಾರೆಂಟ್ ಜಾರಿಯಾಗಿತ್ತು.ವಾರೆಂಟ್ ಹಿಡಿದು ನಿರ್ಮಾಪಕ ಮನೆಗೆ ಬಂಧಿಸಲು ಬಂದಿದ್ದ ತಾವರೆಕೆರೆ ಪೊಲೀಸರು
ನಿನ್ನೆ ತಡರಾತ್ರಿ ಬಂದಿದ್ದರು.ಈ ವೇಳೆ ಚಿತ್ರನಟ ದುನಿಯಾ ವಿಜಯ್ ಸುಂದರ್ ನನ್ನು ಬಂಧಿಸದಂತೆ ತಡೆದಿದ್ದರು.ಈ ವೇಳೆ ಹಿಂಬಾಗಿಲಿನಿಂದ ಸುಂದರ್ ಪರಾರಿಯಾಗಿದ್ದಾರೆ.
ಇದಕ್ಕೆ ಸಂಬಂದಿಸಿದಂತೆ ತಾವರೆಕೆರೆ ಹೆಡ್ ಕಾನ್ಸ್ ಟೇಬಲ್ ಗೋವಿಂದರಾಜು ದೂರು ಸಲ್ಲಿಸಿದ್ದು, ಸದ್ಯ ಸಿಕೆ ಅಚ್ಚುಕಟ್ಟು ಠಾಣೆಯಲ್ಲಿ ಐಪಿಸಿ 363 ಅನ್ವಯ ಪ್ರಕರಣ ದಾಖಲು ಮಾಡಲಾಗಿದೆ.